Atal Bihari Vajpayee: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿದ ಡಿಕೆ ಶಿವಕುಮಾರ್
ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿಗೆ ತನ್ನದೆ ಆದ ಇತಿಹಾಸ ಇದೆ. ರಾಜಕೀಯ ನಾಯಕರು, ಉದ್ದಿಮೆದಾರರು ಬೆಂಗಳೂರು ಬೆಳೆಯಲು ಕಾರಣ ಎನ್ನುತ್ತಾ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿದರು.
ಬೆಂಗಳೂರು: ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DCM dk shivakumar) ಅವರು ಮಾತನಾಡಿದರು. ಬೆಂಗಳೂರಿಗೆ ತನ್ನದೆ ಆದ ಇತಿಹಾಸ ಇದೆ. ರಾಜಕೀಯ ನಾಯಕರು, ಉದ್ದಿಮೆದಾರರು ಬೆಂಗಳೂರು ಬೆಳೆಯಲು ಕಾರಣ. ಭಾರತದ ವಿಶ್ವದಲ್ಲಿ ಬೆಳೆಯಲು ಬಹಳ ಅವಕಾಶಗಳಿವೆ. ಹಿಂದೆ ಉತ್ತರ ಭಾರತದಲ್ಲಿ ಇಂಜಿನಿಯರಿಂಗ್ ಕಾಲೇಜ್ ಇರಲಿಲ್ಲ. ನಾವು ಮಾಡುವಷ್ಟು ಡಾಕ್ಟರ್ ಬೆಳೆಸುವಷ್ಟು ಬೇರೆ ಕಡೆ ಇಲ್ಲ. ವಿಶ್ವಮಟ್ಟದಲ್ಲಿ ಟೆಕ್ನಾಲಜಿ ಇದೆ. ಹೊರಗಡೆ ದೇಶಕ್ಕೆ ರಫ್ತು ಮಾಡಿ ಸರ್ಕಾರ ನಿಮ್ಮ ಸೇವೆ ಗೌರವಿಸುತ್ತೆ. ದೇಶದಲ್ಲಿ ಬೇರೆ ಬೇರೆ ಕಾನೂನು ಇದ್ದರೂ ಸಹ ನಾವು ಉದ್ದಿಮೆದಾರರು ಶಕ್ತಿಶಾಲಿಯಾಗಿರಬೇಕು. ಕೇರಳದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲ್ಲ, ತಮಿಳುನಾಡಿನಲ್ಲಿ ಸ್ವಲ್ಪ ಅವಕಾಶ ಇದೆ. ಆಂಧ್ರಪ್ರದೇಶ ಈಗ ಕೈಗಾರಿಕೆ ಸ್ಥಾಪನೆ ಶುರುವಾಗಿದೆ. ಆದರೆ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಾವು ಹೂಡಿಕೆದಾರರಿಗೆ ಮುಕ್ತವಾಗಿದ್ದೇವೆ. ನಿಮಗೆ ಕಿವಿಮಾತು ಹೇಳ್ತೀನಿ – ಉದ್ಯೋಗ ಸೃಷ್ಟಿ ಮಾಡಬೇಕು ಅನ್ನೂದು ನಮ್ಮ ಉದ್ದೇಶ. ಸೆಕೆಂಡ್, ತ್ರಿ ಟೈಯರ್ ಸಿಟಿಗಳಲ್ಲಿ ಉದ್ಯೋಗ ಸೃಷಿಗೆ ನೀವು ಆಲೋಚನೆ ಮಾಡಬೇಕು. ಬೆಂಗಳೂರಿನ ಒತ್ತಡ ಕಡಿಮೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಆಗಬೇಕು. ಆ ಭಾಗದ ಯುವಕರಿಗೆ ಉದ್ಯೋಗ ಸಿಗಲಿ. ನಮ್ಮ ಹಳ್ಳಿ ಮಕ್ಕಳು ಬಹಳ ಬುದ್ದಿವಂತಿದ್ದಾರೆ. ಕರ್ನಾಟಕ ಸರ್ಕಾರ ನಿಮಗೆ ಎಲ್ಲ ಕೆಲಸ ನೀಡ್ತೀವಿ. ದೇಶಕ್ಕೆ ತಾವು ಒಂದು ಆಸ್ತಿ ಆಗಿದ್ದೀರಿ. ಎನ್ ಐಆರ್ ಗಳು ಒಂದು ಪ್ರತ್ಯೇಕ ಇಲಾಖೆ ತೆರೆಯಲು ಮನವಿ ಮಾಡಿದ್ದಾರೆ. ಅದು ತೆರೆಯಲು ನಾವು ಸಿದ್ಧವಾಗಿದ್ದೇವೆ ಎಂದು ಡಿಕೆಶಿ ಹೇಳಿದರು. ಇದೇ ವೇಳೆ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (former Prime minister atal bihari vajpayee) ಅವರನ್ನು ಸ್ಮರಿಸಿದರು.