Hubballi News; ರಾಜ್ಯದಲ್ಲಿ ನಾಯಕನಿಲ್ಲದ ಬಿಜೆಪಿ ಶೋಚನೀಯ ಸ್ಥಿತಿಯಲ್ಲಿದೆ, ಲೋಕ ಸಭಾ ಚುನಾವಣೆಯಲ್ಲಿ ನೆಲಕಚ್ಚಲಿದೆ: ಜಗದೀಶ್ ಶೆಟ್ಟರ್, ವಿಪ ಸದಸ್ಯ

Hubballi News; ರಾಜ್ಯದಲ್ಲಿ ನಾಯಕನಿಲ್ಲದ ಬಿಜೆಪಿ ಶೋಚನೀಯ ಸ್ಥಿತಿಯಲ್ಲಿದೆ, ಲೋಕ ಸಭಾ ಚುನಾವಣೆಯಲ್ಲಿ ನೆಲಕಚ್ಚಲಿದೆ: ಜಗದೀಶ್ ಶೆಟ್ಟರ್, ವಿಪ ಸದಸ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 22, 2023 | 6:51 PM

ರಾಜ್ಯ ಬಿಜೆಪಿ ಕೆಲವೇ ಕೆಲ ನಾಯಕರ ಹಿಡಿತದಲ್ಲಿದೆ, ತಾನು ಇದನ್ನು ಮೊದಲು ಕೂಡ ಹೇಳಿರುವೆ ಅದೀಗ ನಿಚ್ಛಳವಾಗಿ ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ಶೆಟ್ಟರ್ ಹೇಳಿದರು.

ಹುಬ್ಬಳ್ಳಿ: ಕರ್ನಾಟಕದಲ್ಲಿ ಬಿಜೆಪಿ ಶೋಚನೀಯ ಸ್ಥಿತಿಯಲ್ಲಿದೆ ಇದರ ಪರಿಣಾಮ ಮುಂಬರುವ ಲೋಕಸಭಾ ಚುನಾವನೆಯಲ್ಲಿ (Lok Sabha Polls) ಗೊತ್ತಾಗಲಿದೆ ಮತ್ತು ಕಾಂಗ್ರೆಸ್ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು. ಹುಬ್ಬಳ್ಳಿಯಲ್ಲಿಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಲೀಡರ್ ಲೆಸ್ ಪಾರ್ಟಿಯಾಗಿದೆ (leaderless party), 16ನೇ ವಿಧಾನ ಸಭೆಯ ಮೊದಲ ಅಧಿವೇಶನ ಶುರುವಾಗಿ ರಾಜ್ಯಪಾಲರು ಭಾಷಣ ಮಾಡಿದ್ದಾಯಿತು, ಬಜೆಟ್ ಮಂಡನೆ ಆಯಿತು ಮತ್ತು ಅದರ ಮೇಲೆ ಮುಖ್ಯಮಂತ್ರಿಗಳು ಉತ್ತರ ನೀಡಿದ್ದೂ ಆಯಿತು, ಅಧಿವೇಶನ ಕೂಡ ಮುಗಿದುಹೋಯಿತು; ಇಷ್ಟೆಲ್ಲ ಆದರೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಅಯ್ಕೆ ಮಾಡುವುದು ಬಿಜೆಪಿಗೆ ಸಾಧ್ಯವಾಗಿಲ್ಲ, ಹಾಗಾಗೇ ತಾವು ಅದನ್ನು ನಾಯಕನಿಲ್ಲದ ಪಾರ್ಟಿ ಅಂತ ಕರೆಯೋದು ಅಂತ ಶೆಟ್ಟರ್ ಹೇಳಿದರು. ಮುಂದುವರಿದು ಮಾತಾಡಿದ ಅವರು ರಾಜ್ಯ ಬಿಜೆಪಿ ಕೆಲವೇ ಕೆಲ ನಾಯಕರ ಹಿಡಿತದಲ್ಲಿದೆ, ತಾನು ಇದನ್ನು ಮೊದಲು ಕೂಡ ಹೇಳಿರುವೆ ಅದೀಗ ನಿಚ್ಛಳವಾಗಿ ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ