Siddaramaiah: ಒಂದೇ ವೇದಿಕೆಯಲ್ಲಿದ್ದರೂ ಸಿಎಂ-ಡಿಸಿಎಂ ನಡುವೆ ಮಾತಿಲ್ಲ.. ಕತೆಯಿಲ್ಲ!
ಇಂದು (ಜು. 22) ಶನಿವಾರ, ರಾಜಧಾನಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡಿಕೊಳ್ಳದೇ ಇದ್ದಿದ್ದು ಅನೇಕ ಜನರ ಹುಬ್ಬೇರುವಂತೆ ಮಾಡಿತು.
ಇಂದು ಶನಿವಾರ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರುಗಳು ಸಕ್ರಿಯರಾಗಿ ಭಾಗವಹಿಸಿದ್ದರು. ಇದು ಸಂತೋಷದ ಸಮಾರಂಭ. ಅತ್ಯಂತ ಸಂತೋಷದಿಂದ ರಾಜ್ಯದ ಸಿಎಂ ಆಗಿ ಭಾಗಿಯಾಗ್ತಾ ಇದ್ದೀನಿ. 68 ಉದ್ಯಮಿಗಳಿಗೆ ಶ್ರೇಷ್ಠ ರಫ್ತು ಪ್ರದಾನ ಮಾಡ್ತಾ ಇದ್ದೇವೆ. 1992-93ರಿಂದ ಪ್ರಶಸ್ತಿ ಕೊಡುವ ಪರಿಪಾಠ ಆರಂಭವಾಗಿದೆ. ದೇಶ ವಿದೇಶಗಳಿಗೆ ರಫ್ತು ಮಾಡಿ ಪ್ರಶಸ್ತಿ ಗಳಿಸೋದು ದೊಡ್ಡ ಸಾಧನೆ. ಕರ್ನಾಟಕದಲ್ಲಿ ಉದ್ಯಮ ಚೆನ್ನಾಗಿ ನಡೆಯುತ್ತಿದೆ. ಹೂಡಿಕೆ ಹೆಚ್ಚಾಗಬೇಕಾದ್ರೆ ಕೈಗಾರಿಕೆಗೆ ಪ್ರೋತ್ಸಾಹದ ವಾತಾವರಣ ಇರಬೇಕು. ಅಂತಹ ವಾತಾವರಣ ಕರ್ನಾಟಕದಲ್ಲಿದೆ. ಹೊಸ ಕೈಗಾರಿಕಾ ನೀತಿ ಘೋಷಣೆ ಮಾಡಿದಾಗ, ಅನೇಕ ಕೈಗಾರಿಕೋದ್ಯಮಿಗಳು ಅದನ್ನು ಬೆಂಬಲಿಸಿ ಸ್ವಾಗತಿಸಿದ್ರು ಎಂದು ಸಂತಸ ಪಟ್ಟರು.
ಇನ್ನು ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರೂ ಸಹ ಬೆಂಗಳೂರಿಗೆ ತನ್ನದೆ ಆದ ಇತಿಹಾಸ ಇದೆ. ರಾಜಕೀಯ ನಾಯಕರು, ಉದ್ದಿಮೆದಾರರು ಬೆಂಗಳೂರು ಬೆಳೆಯಲು ಕಾರಣರಾಗಿದ್ದಾರೆ. ಭಾರತದ ವಿಶ್ವದಲ್ಲಿ ಬೆಳೆಯಲು ಬಹಳ ಅವಕಾಶಗಳಿವೆ. ಇಡಿ ದೇಶದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ನಾವು ಹೂಡಿಕೆದಾರರಿಗೆ ಮುಕ್ತವಾಗಿದೆ ಎಂದು ರಾಜ್ಯದಲ್ಲಿರುವ ಕೈಗಾರಿಕಾ ಸ್ನೇಹಿ ವಾತಾವರಣದ ಬಗ್ಗೆ ಸಂಭ್ರಮಿಸಿದರು.
ಆದರೆ ಗಮನಾರ್ಹವೆಂದರೆ ಒಂದೇ ವೇದಿಕೆಯಲ್ಲಿದ್ರೂ ಸಿಎಂ – ಡಿಸಿಎಂ ನಡುವೆ ಮಾತಿಲ್ಲ.. ಕತೆಯಿಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು! ಇದು ಅನೇಕರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ