Video: ಗುಜರಾತ್ನಲ್ಲಿ ಭಾರೀ ಮಳೆ: ಕೊಚ್ಚಿಹೋದ ನೂರಾರು ಗ್ಯಾಸ್ ಸಿಲಿಂಡರ್
ಗುಜರಾತ್ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಎರಡು ಗಂಟೆಯಲ್ಲಿ 9 ಇಂಚು ಮಳೆ ಆಗಿದೆ. ಧಾರಾಕಾರ ಮಳೆಗೆ ನವಸಾರಿ ನಗರ ಸಂಪೂರ್ಣ ಮುಳುಗಡೆಯಾಗಿದೆ. ಜೊತೆಗೆ ಗೋದಾಮಿನಲ್ಲಿಟ್ಟಿದ್ದ ಸಾಕಷ್ಟು ಗ್ಯಾಸ್ ಸಿಲಿಂಡರ್ಗಳು ಕೊಚ್ಚಿಹೋಗಿವೆ.
ಗುಜರಾತ್, ಜುಲೈ 22: ಗುಜರಾತ್ನಲ್ಲಿ ಎರಡು ಗಂಟೆಯಲ್ಲಿ 9 ಇಂಚು ಮಳೆ (Heavy rain) ಸುರಿದಿದೆ. ಪರಿಣಾಮ ನವಸಾರಿ ನಗರ ಸಂಪೂರ್ಣ ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧ ಪ್ರದೇಶಗಳಲ್ಲಿ 1 ಅಡಿಯಿಂದ 6 ಅಡಿವರೆಗೆ ನೀರು ತುಂಬಿದೆ. ಮಳೆಯ ಆರ್ಭಟಕ್ಕೆ ಸೆಂಟ್ರಲ್ ಬ್ಯಾಂಕ್ ಪ್ರದೇಶದಲ್ಲಿ ಕಾರುಗಳು ಮುಳುಗಡೆಯಾಗಿವೆ. ಅದೇ ರೀತಿಯಾಗಿ ಗೋದಾಮಿನಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ಗಳು ಕೊಚ್ಚಿಹೋಗಿವೆ. ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

