Belagavi Video : ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಚರಂಡಿಯಲ್ಲಿ ಬಿದ್ದ ಕಾಂಗ್ರೆಸ್ ಕಾರ್ಯಕರ್ತ
ರಾಜ್ಯ ಸರ್ಕಾರದ 40% ಕಮಿಷನ್ ಆರೋಪ, ಪಿಎಸ್ಐ ನೇಮಕಾತಿ ಹಗರಣವನ್ನು ವಿರೋಧಿಸಿ ಕಾಂಗ್ರೆಸ್ ಯುವ ಘಟಕ ಸುವರ್ಣಸೌಧ ಬಳಿ ಪ್ರತಿಭಟನೆ ಮಾಡಿದೆ.
ಬೆಳಗಾವಿ: ರಾಜ್ಯ ಸರ್ಕಾರದ (Karnataka Government) 40% ಕಮಿಷನ್ ಆರೋಪ, ಪಿಎಸ್ಐ ನೇಮಕಾತಿ ಹಗರಣವನ್ನು (PSI Recruitment Scam) ವಿರೋಧಿಸಿ ರಾಜ್ಯ ಕಾಂಗ್ರೆಸ್ ಯುವ (Karnataka Youth Congress) ಘಟಕ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ನೇತೃತ್ವದಲ್ಲಿ ಸುವರ್ಣಸೌಧ (Suvarna Soudha) ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ನಲಪಾಡ್ ಬ್ಯಾರಿಕೇಡ್ ತಳ್ಳಿ ಸುವರ್ಣಸೌಧದತ್ತ ನುಗ್ಗಲು ಯತ್ನಿಸಿದ್ದರು. ಇದರಿಂದ ಪೊಲೀಸರು ನಲಪಾಡ್ ಸೇರಿ ‘ಕೈ’ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ಸಮಯದಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಎಂಟು ಅಡಿಗಳಷ್ಟು ಆಳದ ಚರಂಡಿಯಲ್ಲಿ ಬಿದಿದ್ದಾನೆ. ಕೂಡಲೇ ಆತನನ್ನ ರಕ್ಷಿಸಿ ಪೊಲೀಸರು ವಶಕ್ಕೆ ಪಡೆದರು.
Published on: Dec 26, 2022 05:00 PM
Latest Videos