ಸುಧಾಕರ್, ಅಶೋಕ್ ನೇತೃತ್ವದ ಸಭೆ ಅಂತ್ಯ: ಕೊವಿಡ್ ಮಾರ್ಗಸೂಚಿ ಪ್ರಕಟ, ಏನೇನು ಕಡ್ಡಾಯ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಚಿವರಾದ ಸುಧಾಕರ್, ಅಶೋಕ್ ನೇತೃತ್ವದ ಸಭೆ ಅಂತ್ಯವಾಗಿದ್ದು, ನ್ಯೂ ಇಯರ್ ಸೆಲೆಬ್ರೇಷನ್‌ಗೂ ಹೊಸ ಡೆಡ್‌ಲೈನ್ಸ್ ಪ್ರಕಟವಾಗಿದೆ. ಹಾಗಾದ್ರೆ ಏನೇನು ಕಡ್ಡಾಯ? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೇರೆ ದೇಶಗಳಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. ಇದರಿಂದ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಇಂದು(ಡಿಸೆಂಬರ್ 26) ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವರಾದ ಆರ್.ಅಶೋಕ್, ಸುಧಾಕರ್ ಕೊವಿಡ್ ಸಭೆ ನಡೆಸಿದರು. ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಜ್ಞರ ಜತೆ ಚರ್ಚಿಸಿ ಕೆಲ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್ ಕೋವಿಡ್ ಗೈಡ್ಲೈನ್ಸ್ ಬಗ್ಗೆ ಮಾತನಾಡಿದರು.
Latest Videos