ಕಾಂಗ್ರೆಸ್ ಸದಾ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದೆ, ಅದು ವಿಭಜಿಸಿದ್ದು ಪಾಕಿಸ್ತಾನವನ್ನು: ದಿನೇಶ್ ಗುಂಡೂರಾವ್, ಸಚಿವ

ಕಾಂಗ್ರೆಸ್ ಸದಾ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದೆ, ಅದು ವಿಭಜಿಸಿದ್ದು ಪಾಕಿಸ್ತಾನವನ್ನು: ದಿನೇಶ್ ಗುಂಡೂರಾವ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 06, 2024 | 12:15 PM

ಪ್ರತ್ಯೇಕ ದಕ್ಷಿಣ ಭಾರತದ ಬಗ್ಗೆ ಮಾತಾಡಿದ್ದು ತಪ್ಪು ಅಂತ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹೇಳಿದ್ದಾರೆ, ಅಸಲಿಗೆ ಸುರೇಶ್ ದೇಶ ಒಡೆಯವ ಮಾತು ಆಡೇ ಇಲ್ಲ, ಅನುದಾನ ಹಂಚಿಕೆಯಲ್ಲಿ ಅಗುತ್ತಿರುವ ತಾರತಮ್ಯದ ಬಗ್ಗೆ ಮಾತ್ರ ಅವರು ಮಾತಾಡಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ದೇಶ ಕಟ್ಟುವ ಕೆಲಸ ಮಾಡಿದೆ, ಅದು ಪಾಕಿಸ್ತಾನವನ್ನು ಮಾತ್ರ ಇಬ್ಭಾಗ ಮಾಡಿದೆ ಎಂದು ಸಚಿವ ಹೇಳಿದರು. 

ಮೈಸೂರು: ಕಾಂಗ್ರೆಸ್ (Congress) ಯಾವತ್ತೂ ದೇಶ ಒಡೆಯುವ ಕೆಲಸ ಮಾಡಿಲ್ಲ ಎಲ್ಲರನ್ನು ಒಗ್ಗೂಡಿಸಿಕೊಂಡು ದೇಶದ ಸ್ವಾತಂತ್ರ್ಯ, ಐಕ್ಯತೆ ಮತ್ತು ಸಮಗ್ರತೆಗಾಗಿ ಹೋರಾಡಿದ ಪಕ್ಷ ತಮ್ಮದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಡಿಕೆ ಸುರೇಶ್ (DK Suresh) ಪ್ರತ್ಯೇಕ ದಕ್ಷಿಣ ಭಾರತದ ಬಗ್ಗೆ ಮಾತಾಡಿದ್ದು ತಪ್ಪು ಅಂತ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹೇಳಿದ್ದಾರೆ, ಅಸಲಿಗೆ ಸುರೇಶ್ ದೇಶ ಒಡೆಯವ ಮಾತು ಆಡೇ ಇಲ್ಲ, ಅನುದಾನ ಹಂಚಿಕೆಯಲ್ಲಿ ಅಗುತ್ತಿರುವ ತಾರತಮ್ಯದ ಬಗ್ಗೆ ಮಾತ್ರ ಅವರು ಮಾತಾಡಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ದೇಶ ಕಟ್ಟುವ ಕೆಲಸ ಮಾಡಿದೆ, ಅದು ಪಾಕಿಸ್ತಾನವನ್ನು ಮಾತ್ರ ಇಬ್ಭಾಗ ಮಾಡಿದೆ ಎಂದು ಸಚಿವ ಹೇಳಿದರು.

ಬಿಜೆಪಿ ನಾಯಕರು ಇತಿಹಾಸದ ಪುಟಗಳನ್ನು ತಿರುವಿ ನೋಡಬೇಕು, ಅವರ ಪೈಕಿ ಯಾರಾದರೂ ದೇಶಕ್ಕಾಗಿ ಹೋರಾಟ ಮಾಡಿದ ನಿದರ್ಶನ ಇದೆಯಾ? ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 15-20 ವರ್ಷಗಳ ಕಾಲ ಅಧಿಕಾರ ನಡೆಸಿದೆ, ಕಾಂಗ್ರೆಸ್ ದೇಶ ಒಡೆಯು ಕೆಲಸ ಮಾಡಿದ್ಯಾವಾಗ ಅಂತ ಅವರು ಹೇಳುತ್ತಾರಾ? ಎಂದು ಗುಂಡೂರಾವ್ ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರು ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ನೆಹರೂ ಮೊದಲಾದವರ ಜೊತೆ ಕ್ವಿಟ್ ಇಂಡಿಯಾ  ಆ್ಯಕ್ಟ್ ಚಳವಳಿ ನಡೆಸುತ್ತಿದ್ದರೆ, ಹಿಂದೂ ಮಹಾಸಭಾ ನಾಯಕರು ಮುಸ್ಲಿಂ ಲೀಗ್ ಜೊತೆ ಸೇರಿ ಸರ್ಕಾರ ರಚಿಸಿದ್ದರು, ಶ್ಯಾಮ ಪ್ರಸಾದ್ ಮುಖರ್ಜಿ ಅವರು ಬ್ರಿಟಿಷರ ಜೊತೆ ಸೇರಿ ಬಂಗಾಳದ ಉಪ ಪ್ರಧಾನಿಯಾಗಿದ್ದರು ಎಂದು ಆರೋಗ್ಯ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ