ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುವ ಪೊಲೀಸರು ಕುಡುಕರಿಂದ ಇನ್ನೆಷ್ಟು ದಿನ ಬೈಸಿಕೊಳ್ಳುತ್ತಾರೆ?

ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುವ ಪೊಲೀಸರು ಕುಡುಕರಿಂದ ಇನ್ನೆಷ್ಟು ದಿನ ಬೈಸಿಕೊಳ್ಳುತ್ತಾರೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 06, 2024 | 11:22 AM

ಪೊಲೀಸರು ಇವರ ಮೇಲೆ ಕರುಣೆ ತೋರುತ್ತಿದ್ದಾರೋ ಗೊತ್ತಿಲ್ಲ, ನಾಲ್ಕು ತದುಕಿ ಸ್ಟೇಷನ್ ನಲ್ಲಿ ಕೂಡಿಹಾಕಿದ್ದರೆ ಮದ್ಯದ ಅಮಲು ಇಳಿಯುತಿತ್ತು ಮತ್ತು ಸೊಕ್ಕು ಸಹ ಅಡಗುತಿತ್ತು. ಕೋಡಿಗೇಹಳ್ಳಿ ಪೊಲೀಸರು ಕುಡುಕರನ್ನು ಬಂಧಿಸಿರುವ ಮಾಹಿತಿ ಇದೆ. ಆ ಕೆಲಸವನ್ನು ಅವರು ಕೂಡಲೇ ಮಾಡಬೇಕಿತ್ತು.

ಬೆಂಗಳೂರು: ವಾರಾಂತ್ಯಗಳಲ್ಲಿ ಬೆಂಗಳೂರು ನಗರದ ರಸ್ತೆಗಳ ಮೇಲೆ ಇಂಥ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟಿವೆ ಮರಾಯ್ರೆ! ಕಂಠಮಟ್ಟ ಕುಡಿದು ರಸ್ತೆಗಳಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳ ಮಾಡೋದು. ಜಗಳ ಅಂತ ಹೇಳಿದರೆ, ಅಂಡರ್ ಸ್ಟೇಟ್ ಮೆಂಟ್ ಅಗುತ್ತೆ, ಕುಡಿದ ಮತ್ತಿನಲ್ಲಿ (inebriated state) ಅವರು ಪೊಲೀಸರನ್ನೇ ಹೆದರಿಸುತ್ತಾರೆ ಬೆದಸುತ್ತಾರೆ. ಹೆಬ್ಬಾಳ ರಿಂಗ್ ರೋಡಲ್ಲಿ (Hebbal Ring Road) ಅಳವಡಿಸಿರುವ ಸಿಸಿಟಿವಿಯೊಂದರಲ್ಲಿ ಶನಿವಾರ ರಾತ್ರಿ ಸೆರೆಯಾಗಿರುವ ದೃಶ್ಯವನ್ನು ನೋಡಿ. ನೋಡಲು ಕುಲೀನ ಮನೆತನದವರಂತೆ ಕಾಣುವ ಮೂರು ಜನ ಡ್ರಂಕ್ ಅಂಡ್ ಡ್ರೈವ್ (drunk and drive) ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ತಮ್ಮ ಕಾರನ್ನು ತಡೆದ ಕಾರಣಕ್ಕೆ ದಬಾಯಿಸುತ್ತ ಕುಲಗೆಟ್ಟವರಂತೆ ವರ್ತಿಸುತ್ತಿದ್ದಾರೆ. ಮೂರು ಜನ ಫ್ರೇಮಿನಲ್ಲಿ ಕಂಡರೆ, ಇವರೊಂದಿಗಿದ್ದ ಮತ್ತೊಬ್ಬ ದೂರದಲ್ಲಿದ್ದಾನೆ.

ಪೊಲೀಸರು ಇವರ ಮೇಲೆ ಕರುಣೆ ತೋರುತ್ತಿದ್ದಾರೋ ಗೊತ್ತಿಲ್ಲ, ನಾಲ್ಕು ತದುಕಿ ಸ್ಟೇಷನ್ ನಲ್ಲಿ ಕೂಡಿಹಾಕಿದ್ದರೆ ಮದ್ಯದ ಅಮಲು ಇಳಿಯುತಿತ್ತು ಮತ್ತು ಸೊಕ್ಕು ಸಹ ಅಡಗುತಿತ್ತು. ಕೋಡಿಗೇಹಳ್ಳಿ ಪೊಲೀಸರು ಕುಡುಕರನ್ನು ಬಂಧಿಸಿರುವ ಮಾಹಿತಿ ಇದೆ. ಆ ಕೆಲಸವನ್ನು ಅವರು ಕೂಡಲೇ ಮಾಡಬೇಕಿತ್ತು. ಪೊಲೀಸರು ಕಾರನ್ನು ನಡೆದಾಕ್ಷಣ ಅವರು ಯಾರಿಗೋ ಫೋನ್ ಮಾಡುವಂತೆ ನಟಿಸುತ್ತಾರೆ ಅಂಥಕ್ಕೆಲ್ಲ ಪೊಲೀಸರು ಕ್ಯಾರೇ ಅನ್ನಬೇಕಿಲ್ಲ. ಅವರು ಯಾರಿಗೂ ಪೋನ್ ಮಾಡಿರಲ್ಲ, ತಮಗೆ ಗಣ್ಯರ ಜತೆ ಸಂಪರ್ಕ ಇದೆ ಅಂತ ಹೆದರಿಸಲು ಹಾಗೆ ಮಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ