ತುಮಕೂರು: 1,35,000 ಪ್ಲಾಸ್ಟಿಕ್ ಬಾಟಲಿಗಳಿಂದ ಮೂಡಿದ ನಮ್ಮ ಸಂವಿಧಾನ

ತುಮಕೂರು: 1,35,000 ಪ್ಲಾಸ್ಟಿಕ್ ಬಾಟಲಿಗಳಿಂದ ಮೂಡಿದ “ನಮ್ಮ ಸಂವಿಧಾನ”

ಮಹೇಶ್ ಇ, ಭೂಮನಹಳ್ಳಿ
| Updated By: ವಿವೇಕ ಬಿರಾದಾರ

Updated on:Feb 06, 2024 | 10:48 AM

ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ತುಮಕೂರು ಜಿಲ್ಲೆಯಲ್ಲಿ ಭಾರತ ಸಂವಿಧಾನ ಜಾಗೃತಿ ಜಾಥ ಅಭಿಯಾನ ನಡೆಸಲಾಯಿತು. ಈ ಸಂಬಂಧ ತುಮಕೂರು ನಗರದಲ್ಲಿ ಅನುಪಯುಕ್ತವಾಗಿ ಇದ್ದಂತಹ 1,35,000 ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಇವುಗಳಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ "ನಮ್ಮ ಸಂವಿಧಾನ" ಎಂದು ಕನ್ನಡದ ವರ್ಣಮಾಲೆಗಳಲ್ಲಿ ವರ್ಣರಂಜಿತವಾಗಿ ಕ್ರಮಬದ್ದವಾಗಿ ಜೋಡಿಸಲಾಗಿದೆ.

ಭಾರತ ಸಂವಿಧಾನದ (Constitution) 75ನೇ ವರ್ಷದ ಅಮೃತ ಮಹೋತ್ಸವದ (Amrita Mahotsava) ಅಂಗವಾಗಿ ತುಮಕೂರು (Tumakur) ಜಿಲ್ಲೆಯಲ್ಲಿ ಭಾರತ ಸಂವಿಧಾನ ಜಾಗೃತಿ ಜಾಥ ಅಭಿಯಾನ ನಡೆಸಲಾಯಿತು. ಈ ಸಂಬಂಧ ತುಮಕೂರು ನಗರದಲ್ಲಿ ಅನುಪಯುಕ್ತವಾಗಿ ಇದ್ದಂತಹ 1,35,000 ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಇವುಗಳಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ “ನಮ್ಮ ಸಂವಿಧಾನ” ಎಂದು ಕನ್ನಡದ ವರ್ಣಮಾಲೆಗಳಲ್ಲಿ ವರ್ಣರಂಜಿತವಾಗಿ ಕ್ರಮಬದ್ದವಾಗಿ ಜೋಡಿಸಲಾಗಿದೆ. ಈ ಒಂದು ಪ್ಲಾಸ್ಟಿಕ್ ಬಾಟಲಿಗಳಿಂದ ನಮ್ಮ ಸಂವಿಧಾನ ಎಂಬ ವಿಶೇಷ ಆಕೃತಿಯನ್ನು ಕನ್ನಡ ವರ್ಣಮಾಲೆಯಲ್ಲಿ ರಚಿಸಲು 305 ವಿದ್ಯಾರ್ಥಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಗಳು ಮತ್ತು ಸಿಬ್ಬಂದಿ ವರ್ಗದವರು ಕೈ ಜೋಡಿಸಿದ್ದಾರೆ. ನಮ್ಮ ಸಂವಿಧಾನ ಎಂಬ ಅಕೃತಿಯನ್ನು ಪ್ಲಾಸ್ಟಿಕ್​ ಬಾಟಲಿಯಲ್ಲಿ ದೇಶದಲ್ಲಿ ಜೋಡಿಸಿರುವುದು ಇದೆ ಪ್ರಥಮ ಬಾರಿಗೆ. ಈ ಹಿಂದೆ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ವತಿಯಿಂದ ಒಂದು ಲಕ್ಷ ವಾಟರ್ ಬಾಟಲಿಗಳಿಂದ ತುಮಕೂರು ಎಂಬ ಅಕ್ಷರ ನಿರ್ಮಿಸಿ ಗಿನ್ನಿಸ್ ದಾಖಲೆ ನಿರ್ಮಿಸಲಾಗಿತ್ತು. ಈ ಬೆನ್ನೆಲೆ ಸಂವಿಧಾನದ ಮಹತ್ವವನ್ನು ಸಾಮಾನ್ಯ ಜನರಿಗೆ ತಿಳಿಸುವ ಸಲುವಾಗಿ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ ಸಂಚಾರ ಮಾಡುತ್ತಿದ್ದು ಇದೀಗ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬೃಹತ್ ಮಟ್ಟದ ಖಾಲಿ ವಾಟರ್ ಬಾಟಲಿಗಳಿಂದ ದಾಖಲೆ ನಿರ್ಮಿಸಲಾಗಿದೆ.

Published on: Feb 06, 2024 08:40 AM