ಕಾಂಗ್ರೆಸ್ ಪಕ್ಷದ ಭಾರತ್ ಜೋಡೊ ಯಾತ್ರೆ ಪುನಾರಾರಂಭ, ಮಂಡ್ಯದಲ್ಲಿ ಹದಿಹರೆಯದ ಬಾಲಕನ ಆಸೆ ಪೂರೈಸಿದ ರಾಹುಲ್
ಮಂಡ್ಯ ಪಾಂಡವಪುರ ತಾಲ್ಲೂಕಿನ ಬೆಳ್ಳಾರೆ ಗ್ರಾಮದಿಂದ ಗುರುವಾರ ಆರಂಭಗೊಂಡಿರುವ ಪಾದಯಾತ್ರೆಯ ವಿಶೇಷತೆ ಎಂದರೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಾಲುಗೊಂಡಿರುವುದು.
ಮಂಡ್ಯ: ದಸರಾ ಹಬ್ಬಕ್ಕಾಗಿ ಎರಡು ದಿನಗಳ ಬ್ರೇಕ್ ನಂತರ ಕಾಂಗ್ರೆಸ್ ಪಕ್ಷದ ಭಾರತ್ ಜೋಡೊ (Bharat Jodo Yatra) ಯಾತ್ರೆ ಪುನರಾರಂಭಗೊಂಡಿದೆ. ಮಂಡ್ಯ ಪಾಂಡವಪುರ ತಾಲ್ಲೂಕಿನ ಬೆಳ್ಳಾರೆ ಗ್ರಾಮದಿಂದ ಗುರುವಾರ ಆರಂಭಗೊಂಡಿರುವ ಪಾದಯಾತ್ರೆಯ ವಿಶೇಷತೆ ಎಂದರೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಪಾಲುಗೊಂಡಿರುವುದು. ಒಬ್ಬ ಹದಿಹರೆಯದ ಬಾಲಕ ಪ್ರಾಯಶಃ ರಾಹುಲ್ ಗಾಂಧಿಯ (Rahul Gandhi) ಅಭಿಮಾನಿ ಇರಬಹುದು-ಅವನಿಗೆ ವಯಾನಾಡ್ ಸಂಸದನೊಂದಿಗೆ ಪೋಟೋ ತೆಗೆಸಿಕೊಳ್ಳುವ ಆಸೆ. ರಾಹುಲ್ ಅವನ ಆಸೆ ಪೂರೈಸುವುದನ್ನು ವಿಡಿಯೊದಲ್ಲಿ ನೋಡಬಹುದು.