Mysuru Dasara 2022: ಬಿಲ್ವಪತ್ರೆ ಹಂಚುತ್ತಿದ್ದ ವ್ಯಕ್ತಿ ಅದನ್ನು ನೆಲಕ್ಕೆ ಬೀಳಿಸುವುದು ಕಂಡು ಬೇಸರಗೊಂಡ ಮುಖ್ಯಮಂತ್ರಿಗಳು ತಾವೇ ಹಂಚಲಾರಂಭಿಸಿದರು!
ಪತ್ರೆಯನ್ನು ಕೆಳಗೆ ಬೀಳಿಸಬೇಡಿ ಅಂತ ಮುಖ್ಯಮಂತ್ರಿಗಳು ಹೇಳಿದರೂ ಅವರು ಬೀಳಿಸುವುದನ್ನು ಮುಂದುವರಿಸಿದರು. ತಾಳ್ಮೆ ಕಳೆದುಕೊಂಡ ಬೊಮ್ಮಾಯಿ ಅವರು ವ್ಯಕ್ತಿಯಿಂದ ತಟ್ಟೆ ಕಸಿದುಕೊಂಡು ತಾವೇ ಬಿಲ್ವಪತ್ರೆ ಹಂಚಲಾರಂಭಿಸಿದರು.
ಮೈಸೂರು: ದಸರಾ ಉತ್ಸವದ ಅಂಗವಾಗಿ ಮೈಸೂರಲ್ಲಿಂದು ಅರಮನೆ ಆವರಣದಲ್ಲಿರುವ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಪೂಜೆ ಸಲ್ಲಿಸಿದರು. ಅ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಗೆ ಮತ್ತು ಅಲ್ಲಿ ನೆರದಿದ್ದ ಜನರಿಗೆ ಬಿಲ್ವಪತ್ರೆಯನ್ನು (bilva patre) ಹಂಚಲಾರಂಭಿಸಿದರು. ಆ ವ್ಯಕ್ತಿಗೆ ಅದ್ಯಾವ ಅವಸರವಿತ್ತೋ, ಬಿಲ್ವಪತ್ರೆಯನ್ನು ನೀಡುವಾಗ ಅರ್ಧದಷ್ಟನ್ನು ನೆಲಕ್ಕೆ ಬೀಳಿಸುತ್ತಿದ್ದರು. ಪತ್ರೆಯನ್ನು ಕೆಳಗೆ ಬೀಳಿಸಬೇಡಿ (drop) ಅಂತ ಮುಖ್ಯಮಂತ್ರಿಗಳು ಹೇಳಿದರೂ ಅವರು ಬೀಳಿಸುವುದನ್ನು ಮುಂದುವರಿಸಿದರು. ತಾಳ್ಮೆ ಕಳೆದುಕೊಂಡ ಬೊಮ್ಮಾಯಿ ಅವರು ವ್ಯಕ್ತಿಯಿಂದ ತಟ್ಟೆ ಕಸಿದುಕೊಂಡು ತಾವೇ ಬಿಲ್ವಪತ್ರೆ ಹಂಚಲಾರಂಭಿಸಿದರು.
Latest Videos