ಕಾಮಗಾರಿಗಳನ್ನು ನಿಲ್ಲಿಸಿ ಬಿಲ್ಗಳನ್ನು ತಡೆಹಿಡಿದು ಗುತ್ತಿಗೆದಾರರಿಗೆ ಉಸಿರುಗಟ್ಟಿಸುವ ಸ್ಥಿತಿ ರಾಜ್ಯ ಸರ್ಕಾರ ಸೃಷ್ಟಿಸಿದೆ: ಡಾ ಸಿ ಎನ್ ಅಶ್ವಥ್ ನಾರಾಯಣ
ಬೆಂಗಳೂರು ಡೆವಲೆಪ್ ಮೆಂಟ್ ಮಿನಿಸ್ಟರ್ ಗೆ ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತಲೇ ಗೊತ್ತಿಲ್ಲ, ಆದರೆ ಬೆಂಗಳೂರು ಅಭಿವೃದ್ಧಿ ಮಾಡುತ್ತೇನೆ ಅಂತಾರೆ ಎಂದು ಅಶ್ವಥ್ ನಾರಾಯಣ ಹೇಳಿದರು.
ಬೆಂಗಳೂರು: ಜನರಿಗೆ ಭಾಗ್ಯಗಳನ್ನು ಕೊಟ್ಟಿರುವುದರಿಂದ ರಾಜ್ಯವನ್ನು ಲೂಟಿ ಮಾಡುವ ಪರವಾನಗಿ ಸಿಕ್ಕಿದೆ ಎಂದು ಭಾವಿಸಿರುವ ರಾಜ್ಯ ಸರ್ಕಾರ ಅಧಿಕಾರದ ದುರ್ಬಳಕೆ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಡಾ ಸಿ ಎನ್ ಅಶ್ವಥ್ ನಾರಾಯಣ (Dr. CN Ashwath Narayan) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವ, ಹೊಸ ಸರ್ಕಾರ ಬಂದಾಗ ಹೊಸ ಅಧಿಕಾರಿಗಳೇನೂ ಬರೋದಿಲ್ಲ, ಹಿಂದಿನ ಸರ್ಕಾರದಲ್ಲಿದ್ದ ಅಧಿಕಾರಿಗಳೇ ಮುಂದುವರಿಯುತ್ತಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಕ್ರಮಗಳು ನಡೆದಿವೆ ಅಂತ ಹೇಳುವ ಸರ್ಕಾರ ಅಧಿಕಾರಿಗಳ ಮೂಲಕ ತನಿಖೆ ಮಾಡಿಸುವ ಬದಲು ಕಾಮಗಾರಿಗಳನ್ನು (development works) ನಿಲ್ಲಿಸಿ, ಬಿಲ್ ಗಳನ್ನು ತಡೆಹಿಡಿದು ಗುತ್ತಿಗೆದಾರರಿಗೆ ಅತ್ಮಹತ್ಯೆ ಮಾಡಿಕೊಳ್ಳುವಷ್ಟು ಹತಾಶ ಸ್ಥಿತಿಯನ್ನು ಸೃಷ್ಟಿಸಿದೆ. ಬೆಂಗಳೂರು ಡೆವಲೆಪ್ ಮೆಂಟ್ ಮಿನಿಸ್ಟರ್ ಗೆ ಬ್ರ್ಯಾಂಡ್ ಬೆಂಗಳೂರು (Brand Bengaluru) ಅಂದರೇನು ಅಂತಲೇ ಗೊತ್ತಿಲ್ಲ, ಆದರೆ ಬೆಂಗಳೂರು ಅಭಿವೃದ್ಧಿ ಮಾಡುವುದಾಗಿ ಹೇಳುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಉಸಿರುಗಟ್ಟಿಸುವಂಥ ಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಿಸಿದೆ, ಎಂದು ಅಶ್ವಥ್ ನಾರಾಯಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ