ವಿಜಯಪುರ: ರ‍್ಯಾಲಿಯಲ್ಲಿ ಭಾಗಿಯಾದ ಮಹಿಳೆಯರಿಗೆ ಹಣ ಹಂಚಿದ ಕಾಂಗ್ರೆಸ್ ಮುಖಂಡರು!
ಇಷ್ಟೆಲ್ಲ ಜನ ಹೇಗೆ ಜೊತೆಗೂಡುತ್ತಾರೆ, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಉಮೇದುವಾರನ ಮೇಲೆ ಅವರಿಗೆ ಇಷ್ಟು ಪ್ರೀತಿ ಮತ್ತು ಅಭಿಮಾನವೇ ಅಂತ ಆಶ್ಚರ್ಯ ಆಗೋದ್ರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಆದರೆ ಅಸಲಿ ಸಂಗತಿ ಈ ವಿಡಿಯೋದಲ್ಲಿ ನಮಗೆ ಕಣ್ಣಿಗೆ ರಾಚುತ್ತದೆ. ಱಲಿಯಲ್ಲಿ ಭಾಗಿಯಾದ ಮಹಿಳೆಯರಿಗೆ ಸ್ಥಳೀಯ ಮುಖಂಡನೊಬ್ಬ ಹಣ ಹಂಚುತ್ತಿದ್ದಾನೆ.
ವಿಜಯಪುರ: ನಮ್ಮ ದೇಶದಲ್ಲಿ ಚುನಾವಣೆ (election) ಯಾವುದೇ ಆಗಿರಲಿ, ಅದನ್ನು ಪ್ರಜಾಪ್ರಭುತ್ವದ ಹಬ್ಬ ಅನ್ನುತ್ತಾರೆ. ಹಬ್ಬವೆಂದ ಮೇಲೆ ಆಚರಣೆಗೆ ದುಡ್ಡು ಬೇಡ್ವಾ ಸ್ವಾಮಿ? ಬೇಕು ಖಂಡಿತ ಬೇಕು, ಎಲ್ಲ ರಾಜಕೀಯ ಪಕ್ಷಗಳಿಗೆ (political parties) ಅದು ಗೊತ್ತಿರುತ್ತದೆ. ಅದಕ್ಕೆ ಸಾಕ್ಷಿ ಬೇಕಾ? ಇಲ್ನೋಡಿ! ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ (Raju Algur) ಇಂದು ನಾಮಪತ್ರ ಸಲ್ಲಿಸುವಾಗ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಇಷ್ಟೆಲ್ಲ ಜನ ಹೇಗೆ ಜೊತೆಗೂಡುತ್ತಾರೆ, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಉಮೇದುವಾರನ ಮೇಲೆ ಅವರಿಗೆ ಇಷ್ಟು ಪ್ರೀತಿ ಮತ್ತು ಅಭಿಮಾನವೇ ಅಂತ ಆಶ್ಚರ್ಯ ಆಗೋದ್ರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಆದರೆ ಅಸಲಿ ಸಂಗತಿ ಈ ವಿಡಿಯೋದಲ್ಲಿ ನಮಗೆ ಕಣ್ಣಿಗೆ ರಾಚುತ್ತದೆ. ಱಲಿಯಲ್ಲಿ ಭಾಗಿಯಾದ ಮಹಿಳೆಯರಿಗೆ ಸ್ಥಳೀಯ ಮುಖಂಡನೊಬ್ಬ ಹಣ ಹಂಚುತ್ತಿದ್ದಾನೆ. ಆತನಿಂದ ಹಣ ಪಡೆಯುತ್ತಿರುವವರು ಬಂಜಾರಾ ಸಮುದಾಯಕ್ಕೆ ಸೇರಿದ ಮಹಿಳೆಯರು. ಈ ಮುಖಂಡ ಎಲ್ಲ ಮಹಿಳೆಯರಿಗೆ ಮತ್ತು ಪುರುಷರಿಗೆ ಹಣ ಹಂಚಿರುತ್ತಾನೆ ಆ ಪ್ರಶ್ನೆ ಬೇರೆ. ಹಣ ಸ್ವೀಕರಿಸುವ ಮಹಿಳೆಯರು ಕುಣಿಯುತ್ತಿದ್ದಾರೆ. ಡ್ಯಾನ್ಸ್ ಆಫ್ ಡೆಮೋಕ್ರಸಿ ಅಂತ ಹೇಳುತ್ತಾರಲ್ಲ? ಇದೇ ಇರಬೇಕು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮತದಾನ ಆರಂಭ: ಎಲ್ಲರೂ ಮತ ಹಾಕುವ ಮೂಲಕ ಪ್ರಜಾಪ್ರಭುತ್ವದ ಹಬ್ಬದ ದಿನವನ್ನಾಗಿ ಆಚರಿಸಿ