ಕಾಂಗ್ರೆಸ್ ನಾಯಕರಿಗೆ ಗುಂಡೇಟು ತಿಂದು ಗೊತ್ತಿಲ್ಲ, ಗುಂಡು ಹಾರಿಸುವುದಷ್ಟೇ ಗೊತ್ತು: ಸಿಎನ್ ಅಶ್ವಥ್ ನಾರಾಯಣ, ಶಾಸಕ
ಬಿಜೆಪಿ ನಾಯಕರಿಗೆ ರಾಮನ ಭಕ್ತರೆನಿಸಿಕೊಳ್ಳಲು ಯಾವುದೇ ಸಂಕೋಚವಿಲ್ಲ, ಆದರೆ ಹೆಮ್ಮೆ ಮತ್ತು ಅಭಿಮಾನವಿದೆ ಎಂದು ಹೇಳಿದ ಅಶ್ವಥ್ ನಾರಾಯಣ, ರಾಮ ಅಯೋಧ್ಯೆಯಲ್ಲೇ ಹುಟ್ಟಿದ ಅನ್ನೋದಿಕ್ಕೆ ಏನು ಗ್ಯಾರಂಟಿ ಅಂತ ಹೇಳಿದವರು ಈಗ ತಾವೂ ರಾಮನ ಭಕ್ತರು ಅಂತ ಹೇಳುತ್ತಾ ಗೊಂದಲಕ್ಕೆ ಬಿದ್ದಿದ್ದಾರೆ ಎಂದರು.
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರ ಗೊಂದಲ ಜನರಿಗೆ ಅರ್ಥವಾಗುತ್ತಿಲ್ಲ, ಒಮ್ಮೆ ಬಿಜೆಪಿಯವರೆಲ್ಲ ರಾಮಭಕ್ತರು ಅನ್ನುತ್ತಾರೆ ಡಿಕೆ ಶಿವಕುಮಾರ್ (DK Shivakumar) ತಾನೂ ರಾಮಭಕ್ತ ಅನ್ನುತ್ತಾರೆ, ಸಿದ್ದರಾಮಯ್ಯ (Siddaramaiah) ತಮ್ಮ ಹೆಸರಲ್ಲೇ ರಾಮನಿದ್ದಾನೆ ಅನ್ನುತ್ತಾರೆ; ರಾಜಣ್ಣ, ಪ್ರಿಯಾಂಕ್ ಖರ್ಗೆ, ಆರ್ ಬಿ ತಿಮ್ಮಾಪೂರ-ಮೊದಲಾದ ಕಾಂಗ್ರೆಸ್ ನಾಯಕರೆಲ್ಲ ಭಿನ್ನ ವಿಭಿನ್ನ ಹೇಳಿಕೆಗಳನ್ನು ನೀಡುತ್ತಾರಾದರೂ ಅವರೆಲ್ಲ ರಾಮನನ್ನು ವಿರೋಧಿಸುತ್ತಾರೆ ಎಂದು ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ನಗುತ್ತಾ ಹೇಳಿದರು. ಬಿಜೆಪಿ ನಾಯಕರಿಗೆ ರಾಮನ ಭಕ್ತರೆನಿಸಿಕೊಳ್ಳಲು ಯಾವುದೇ ಸಂಕೋಚವಿಲ್ಲ, ಆದರೆ ಹೆಮ್ಮೆ ಮತ್ತು ಅಭಿಮಾನವಿದೆ ಎಂದು ಹೇಳಿದ ಅವರು, ರಾಮ ಅಯೋಧ್ಯೆಯಲ್ಲೇ ಹುಟ್ಟಿದ ಅನ್ನೋದಿಕ್ಕೆ ಏನು ಗ್ಯಾರಂಟಿ ಅಂತ ಹೇಳಿದವರು ಈಗ ತಾವೂ ರಾಮನ ಭಕ್ತರು ಅಂತ ಹೇಳುತ್ತಾ ಗೊಂದಲಕ್ಕೆ ಬಿದ್ದಿದ್ದಾರೆ ಎಂದರು. ಈಗಿನ ಕಾಂಗ್ರೆಸ್ ನಾಯಕರಲ್ಲಿ ಯಾರು ಸ್ವಾತಂತ್ರ್ಯ ಹೋರಾಟಗಾರು ಅಂತ ಪ್ರಶ್ನಿಸಿದ ಶಾಸಕ, ಇವರಿಗೆ ಗುಂಡೇಟು ತಿಂದು ಗೊತ್ತಿಲ್ಲ, ಆದರೆ ಗುಂಡು ಹಾರಿಸಿ ಬಿಜೆಪಿ ಕಾರ್ಯಕರ್ತರನ್ನು ಸಾಯಿಸುವುದಷ್ಟೇ ಗೊತ್ತು ಅಂದರು. ಕಾಂಗ್ರೆಸ್ ಧುರೀಣರಿಗೆ ರಾಮಭಕ್ತಿಯೂ ಇಲ್ಲ ರಾಷ್ಟ್ರಭಕ್ತಿಯೂ ಇಲ್ಲ ಇವರಲ್ಲಿರೋದು ಸ್ವಯಂಭಕ್ತಿ ಮಾತ್ರ ಎಂದು ಅವರು ಗೇಲಿ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ