ಈಶ್ವರಪ್ಪ ಹೇಳಿದ್ದು ಮತ್ತು ಕಾಂಗ್ರೆಸ್ ನಾಯಕರು ಅರ್ಥೈಸಿಕೊಂಡಿರುವುದರ ನಡುವೆ ಬಹಳ ವ್ಯತ್ಯಾಸವಿದೆ: ಬಿಎಸ್ ಯಡಿಯೂರಪ್ಪ

ಈಶ್ವರಪ್ಪ ಹೇಳಿದ್ದು ಮತ್ತು ಕಾಂಗ್ರೆಸ್ ನಾಯಕರು ಅರ್ಥೈಸಿಕೊಂಡಿರುವುದರ ನಡುವೆ ಬಹಳ ವ್ಯತ್ಯಾಸವಿದೆ: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 10, 2024 | 2:17 PM

ನಗರದಲ್ಲಿ ಆಯೋಜಿಸಲಾಗಿರುವ ಬಂಟರ ಸಮಾವೇಶದಲ್ಲಿ ತಾವು ಪಾಲ್ಗೊಳ್ಳುತ್ತಿರುವುದಾಗಿ ಹೇಳಿದ ಅವರು, ಈಶ್ವರಪ್ಪ ವಿರುದ್ಧ ಎಷ್ಟೇ ಎಫ್ ಐಅರ್ ದಾಖಲಾದರೂ ಚಿಂತೆಯಿಲ್ಲ, ಕಾನೂನು ಚೌಕಟ್ಟಿನೊಳಗೆ ಎಲ್ಲವನ್ನು ಎದುರಿಸಿ ಅರೋಪ ಮುಕ್ತರಾಗುತ್ತಾರೆ ಎಂದರು.

ಶಿವಮೊಗ್ಗ: ಪಕ್ಷದ ಸಹೋದ್ಯೋಗಿ ಮತ್ತು ದಶಕಗಳ ಸ್ನೇಹಿತ ಕೆಎಸ್ ಈಶ್ವರಪ್ಪ (KS Eshwarappa) ಆಡಿರುವ ಮಾತನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಸಮರ್ಥನೆ ಮಾಡಿಕೊಂಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಈಶ್ವರಪ್ಪ ಹೇಳಿದ್ದನ್ನು ಕಾಂಗ್ರೆಸ್ ನಾಯಕರು ಅಪಾರ್ಥ ಮಾಡಿಕೊಂಡು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಒಂದು ಕಾನೂನು ತನ್ನಿ ಅಂತ ಈಶ್ವರಪ್ಪ ಹೇಳಿದ್ದಾರೆ. ಅವರ ಹೇಳಿಕೆಗೂ ಮತ್ತು ಕಾಂಗ್ರೆಸ್ ನಾಯಕರ ಹೇಳುತ್ತಿರುವುದಕ್ಕೂ ಯಾವುದೇ ಸಂಬಂದವಿಲ್ಲ, ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡವನ ಹಾಗೆ ಅವರು ವರ್ತಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ನಗರದಲ್ಲಿ ಆಯೋಜಿಸಲಾಗಿರುವ ಬಂಟರ ಸಮಾವೇಶದಲ್ಲಿ ತಾವು ಪಾಲ್ಗೊಳ್ಳುತ್ತಿರುವುದಾಗಿ ಹೇಳಿದ ಅವರು, ಈಶ್ವರಪ್ಪ ವಿರುದ್ಧ ಎಷ್ಟೇ ಎಫ್ ಐಅರ್ ದಾಖಲಾದರೂ ಚಿಂತೆಯಿಲ್ಲ, ಕಾನೂನು ಚೌಕಟ್ಟಿನೊಳಗೆ ಎಲ್ಲವನ್ನು ಎದುರಿಸಿ ಅರೋಪ ಮುಕ್ತರಾಗುತ್ತಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ