ಮತ್ತೇ ಚಟುವಟಿಕೆಗಳ ಕೇಂದ್ರವಾದ ಬಿಎಸ್ ಯಡಿಯೂರಪ್ಪರ ಬೆಂಗಳೂರು ನಿವಾಸ, ಮನೆ ಮುಂದೆ ನಾಯಕರ ದಂಡು
ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ದಾಳಗಳನ್ನೆಸೆದ ವಿಜಯೇಂದ್ರ, ಶೆಟ್ಟರ್ ಅವರನ್ನು ಬಿಜೆಪಿ ತೆಕ್ಕೆಗೆ ಸೆಳೆದುಕೊಂಡಿದ್ದಾರೆ. ಈ ಬೆಳವಣಿಗೆ ಬಳಿಕ ಯಡಿಯೂರಪ್ಪನವರ ಮನೆ ಮೊದಲಿನ ಹಾಗೆ ಚಟುವಟಿಕೆಯ ಕೇಂದ್ರವಾಗಿದೆ. ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ ಮತ್ತು ಜಿ ಕರುಣಾಕರರೆಡ್ಡಿ ಇಲ್ಲಿಗೆ ಆಗಮಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಬೆಂಗಳೂರು: ಅಧಿಕಾರದ ವರ್ಚಸ್ಸೇ ಹೀಗೆ ಮಾರಾಯ್ರೇ. ದೃಶ್ಯಗಳಲ್ಲಿ ಕಾಣುತ್ತಿರೋದು ನಗರದ ಡಾಲರ್ಸ್ ಕಾಲನುಯಲ್ಲಿರುವ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಮನೆ. ಅವರ ಮಗ ಬಿವೈ ವಿಜಯೇಂದ್ರ (BY Vijayendra) ಪಕ್ಷದ ರಾಜ್ಯಾಧ್ಯಕ್ಷರಾಗುವ ಮೊದಲು, ಅವರ ಮನೆ ಬಳಿ ಈ ಪಾಟಿ ಜನ ಯಾವತ್ತೂ ಕಂಡಿರಲಿಲ್ಲ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ದಯನೀಯ ಸೋಲು ಅನುಭವಿಸಿದ ಬಳಿಕ ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದ ತಪ್ಪಿನ ಅರಿವಾಯಿತು. ಅವರನ್ನು ಪುನಃ ಮುನ್ನೆಲೆಗೆ ತರದೇ ಹೋದರೆ ಪಕ್ಷಕ್ಕೆ ಹೆಚ್ಚು ಹಾನಿಯುಂಟಾಗಲಿದೆ ಮನವರಿಕೆ ಆದ ಕೂಡಲೇ ಅವರ ಮಗ ವಿಜಯೇಂದ್ರ ರಾಜ್ಯಾಧ್ಯಕ್ಷನ ಸ್ಥಾನ ನೀಡಿದರು. ಬರೀ ಬಾಯಿ ಮಾತಿನ ಅಬ್ಬರಕ್ಕೆ ಸೀಮಿತವಾಗಿದ್ದ ಬಿಜೆಪಿ ನಾಯಕರ ಅಬ್ಬರ ವಿಜಯೇಂದ್ರ ಅಧ್ಯಕ್ಷನಾದ ಬಳಿಕ ಬದಲಾಯಿತು.
ಜಗದೀಶ್ ಶೆಟ್ಟರ್ ಬಿಜೆಪಿ ವಾಪಸ್ಸು ಹೋಗಬಹುದೆಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ದಾಳಗಳನ್ನೆಸೆದ ವಿಜಯೇಂದ್ರ, ಶೆಟ್ಟರ್ ಅವರನ್ನು ಬಿಜೆಪಿ ತೆಕ್ಕೆಗೆ ಸೆಳೆದುಕೊಂಡಿದ್ದಾರೆ. ಈ ಬೆಳವಣಿಗೆ ಬಳಿಕ ಯಡಿಯೂರಪ್ಪನವರ ಮನೆ ಮೊದಲಿನ ಹಾಗೆ ಚಟುವಟಿಕೆಯ ಕೇಂದ್ರವಾಗಿದೆ. ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ ಮತ್ತು ಜಿ ಕರುಣಾಕರರೆಡ್ಡಿ ಇಲ್ಲಿಗೆ ಆಗಮಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ