ಬೇಲ್ ಮೇಲೆ ಜೈಲಿಂದ ಹೊರಬಂದಿರುವ ಕಾಂಗ್ರೆಸ್ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಇದೆಯೇ? ಡಾ ಕೆ ಸುಧಾಕರ್
ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಜಾಮೀನಿನ ಮೇಲೆ ಜೈಲಿಂದ ಹೊರಬಂದು ತಿರುಗಾಡುತ್ತಿದ್ದಾರೆ. ಅಂಥವರು ಅದ್ಯಾವ ನೈತಿಕತೆಯ ಆಧಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ? ಎಂದರು.
ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಎಂದು ರಾಜ್ಯಾದ್ಯಂತ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಡಾ ಕೆ ಸುಧಾಕರ್ (Dr K Sudhakar) ಹರಿಹಾಯ್ದರು. ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಜಾಮೀನಿನ (bail) ಮೇಲೆ ಜೈಲಿಂದ ಹೊರಬಂದು ತಿರುಗಾಡುತ್ತಿದ್ದಾರೆ. ಅಂಥವರು ಅದ್ಯಾವ ನೈತಿಕತೆಯ ಆಧಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ? ಇವರಿಂದಾಗಿ ರಾಜ್ಯ ರಾಜಕೀಯ ವ್ಯವಸ್ಥೆಯ ಘನತೆ-ಗೌರವಕ್ಕೆ ಕುಂದುಂಟಾಗಿದೆ ಎಂದು ಸಚಿವರು ಹೇಳಿದರು.
Latest Videos