ಮಹಾರಾಷ್ಟ್ರ ಗಡಿಭಾಗದಲ್ಲಿ ಗಾಂಜಾ ದಂಧೆಕೋರರಿಂದ ಕಲಬುರಗಿಯ ಸಿಪಿಐ ಮತ್ತು ತಂಡದ ಮೇಲೆ ಹಲ್ಲೆ!
ಜಿಲ್ಲೆಯ ಗಡಿಭಾಗಕ್ಕಿರುವ ಮಹಾರಾಷ್ಟ್ರದ ಉಮ್ಮರ್ಗಾ ತಾಲ್ಲೂಕಿನ ತರೂರಿ ಗ್ರಾಮದಲ್ಲಿ ಗಾಂಜಾ ಗ್ಯಾಂಗನ್ನು ಪತ್ತೆ ಮಾಡಲು ಹೋದಾಗ ಶ್ರೀಮಂತ ಮತ್ತು ಅವರ ತಂಡದ ಮೇಲೆ ಹಲ್ಲೆ ನಡೆದಿದೆ.
ಕಲಬುರಗಿ: ಅಕ್ರಮ ದಂಧೆಕೋರಲ್ಲಿ ಅದೆಲ್ಲಿಂದ ಧೈರ್ಯ ಹುಟ್ಟುತ್ತಿದೆಯೋ ಆರ್ಥವಾಗುತ್ತಿಲ್ಲ ಮಾರಾಯ್ರೇ. ಈ ವಿಡಿಯೋ ನೋಡಿ, ಕಲಬುರಗಿಯ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಮಂತ ಬಲ್ಲಾಳ್ ಅವರು ಗಾಂಜಾ ದಂಧೆಯಲ್ಲಿ ತೊಡಗಿರುವ ದುಷ್ಟರ ಗ್ಯಾಂಗೊಂದರ ಸದಸ್ಯರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಗಡಿಭಾಗಕ್ಕಿರುವ ಮಹಾರಾಷ್ಟ್ರದ ಉಮ್ಮರ್ಗಾ ತಾಲ್ಲೂಕಿನ ತರೂರಿ ಗ್ರಾಮದಲ್ಲಿ ಗಾಂಜಾ ಗ್ಯಾಂಗನ್ನು ಪತ್ತೆ ಮಾಡಲು ಹೋದಾಗ ಶ್ರೀಮಂತ ಮತ್ತು ಅವರ ತಂಡದ ಮೇಲೆ ಹಲ್ಲೆ ನಡೆದಿದೆ.
Latest Videos