ರಾಜ್ಯದ ಬೊಕ್ಕಸದಿಂದಲೇ ಸರ್ಕಾರದ ಯೋಜನೆಗಳಿಗೆ ಹಣ ವ್ಯಯಿಸಲಾಗುತ್ತದೆ, ಯಾರದೋ ಅಪ್ಪನ ಮನೆಯ ಹಣದಿಂದಲ್ಲ: ಹೆಚ್ ಸಿ ಬಾಲಕೃಷ್ಣ

|

Updated on: Feb 05, 2024 | 5:59 PM

ಹಿಂದೆ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರಿಗೆ ಚೆನ್ನಾಗಿ ಗೊತ್ತಿದೆ. ಸರ್ಕಾರಿ ಯೋಜನೆಗಳಿಗೆ ನಮ್ಮಪ್ಪನ ಮನೆಯಿಂದಾಗಲೀ ಅವರಪ್ಪ ಮನೆಯಿಂದಾಗಲೀ ಹಣ ಹೊಂದಿಸುವುದಿಲ್ಲ. ಸರ್ಕಾರವನ್ನು ಯಾವುದೇ ಪಕ್ಷ ನಡೆಸುತ್ತಿರಲಿ, ಯೋಜನೆಗಳಿಗೆ ಸರ್ಕಾರದ ಬೊಕ್ಕಸದಿಂದಲೇ ಹಣ ಖರ್ಚುಮಾಡಲಾಗುತ್ತದೆ ಎಂದು ಬಾಲಕೃಷ್ಣ ಹೇಳಿದರು.

ರಾಮನಗರ: ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದವರಲ್ಲ ಆ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಬಗ್ಗೆ ವಿಶೇಷ ಅಭಿರುಚಿಯಿಂದ ಮಾತಾಡುತ್ತಾರೆ. ಅವರನ್ನು ಟೀಕಿಸಿ ಮಾತಾಡುವುದೆಂದರೆ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಮತ್ತು ಮಾಗಡಿಯ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ (HC Balakrishna) ಅವರಿಗೆ ಎಲ್ಲಿಲ್ಲದ ಖುಷಿ. ಇಂದು ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಬಾಲಕೃಷ್ಣ ಅವರಿಗೆ, ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ನಾಯಕರು ತಮ್ಮ ಅಪ್ಪಂದಿರ ಮನೆಗಳಿಂದ ಹಣ ತರೋದಿಲ್ಲ, ಅಂತ ಕುಮಾರಸ್ವಾಮಿ ಹೇಳಿದ್ದಾರೆ ಅಂತ ತಿಳಿಸಿದಾಗ, ಈ ಮಾತನ್ನು ಕುಮಾರಸ್ವಾಮಿ ಹೇಳಿದ್ದಾರಾ? ಅಂತ ಬಾಲಕೃಷ್ಣ ಸೋಜಿಗ ವ್ಯಕ್ತಪಡಿಸಿದರು. ಮುಂದುವರಿದು ಮಾತಾಡಿದ ಅವರು ಹಿಂದೆ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರಿಗೆ ಚೆನ್ನಾಗಿ ಗೊತ್ತಿದೆ. ಸರ್ಕಾರಿ ಯೋಜನೆಗಳಿಗೆ ನಮ್ಮಪ್ಪನ ಮನೆಯಿಂದಾಗಲೀ ಅವರಪ್ಪ ಮನೆಯಿಂದಾಗಲೀ ಹಣ ಹೊಂದಿಸುವುದಿಲ್ಲ. ಸರ್ಕಾರವನ್ನು ಯಾವುದೇ ಪಕ್ಷ ನಡೆಸುತ್ತಿರಲಿ, ಯೋಜನೆಗಳಿಗೆ ಸರ್ಕಾರದ ಬೊಕ್ಕಸದಿಂದಲೇ ಹಣ ಖರ್ಚುಮಾಡಲಾಗುತ್ತದೆ ಎಂದು ಬಾಲಕೃಷ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ