ಮುಗಿಬಿದ್ದ ಅಭಿಮಾನಿಗಳಿಗೆ ತಾಳ್ಮೆಯಿಂದ ಸೆಲ್ಫಿ ನೀಡಿದ ಕಾರ್ತಿಕ್ ಮಹೇಶ್
ಕಾರ್ತಿಕ್ ಮಹೇಶ್ ಗೆದ್ದಿರುವ ಬಿಗ್ ಬಾಸ್ ಟ್ರೋಫಿಯನ್ನು ತಾವೂ ಮುಟ್ಟಬೇಕು ಮತ್ತು ಅದರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಕೆಲವು ಅಭಿಮಾನಿಗಳು ಆಸೆಪಟ್ಟಿದ್ದಾರೆ. ಅವರ ಕೈಗೆ ಕಾರ್ತಿಕ್ ಮಹೇಶ್ ಟ್ರೋಫಿ ನೀಡಿದ್ದಾರೆ. ಜನರ ನೂಕುನುಗ್ಗಲು ನಡುವೆಯೂ ತುಂಬ ತಾಳ್ಮೆಯಿಂದ ಅವರು ಎಲ್ಲ ಫ್ಯಾನ್ಸ್ ಜೊತೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ನಟ ಕಾರ್ತಿಕ್ ಮಹೇಶ್ (Karthik Mahesh) ಅವರು ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಬಿಗ್ ಬಾಸ್. ಇತ್ತೀಚೆಗೆ ಮುಕ್ತಾಯಗೊಂಡ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಶೋನಲ್ಲಿ ಕಾರ್ತಿಕ್ ಮಹೇಶ್ ಅವರು ಟ್ರೋಫಿ ಗೆದ್ದಿದ್ದಾರೆ. ಆ ಟ್ರೋಫಿಯನ್ನು ಹಿಡಿದುಕೊಂಡು ಅವರು ಪುನೀತ್ ರಾಜ್ಕುಮಾರ್ ಸಮಾಧಿಗೆ (Appu Samadhi) ಭೇಟಿ ನೀಡಿದ್ದಾರೆ. ಈ ವೇಳೆ ಅವರ ಜೊತೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕಾರ್ತಿಕ್ ಮಹೇಶ್ ಅವರು ಬಹಳ ತಾಳ್ಮೆಯಿಂದ ಎಲ್ಲರಿಗೂ ಸೆಲ್ಫಿ ನೀಡಿದ್ದಾರೆ. ಬಿಗ್ ಬಾಸ್ ಶೋ ಗೆಲ್ಲಲು ಜನರ ಬೆಂಬಲ ಕಾರಣ ಎಂಬುದನ್ನು ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಕಾರ್ತಿಕ್ ಅವರ ಮುಂದಿನ ಪ್ರಾಜೆಕ್ಟ್ಗಳಿಗೆ ಒಳ್ಳೆಯದಾಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos