ರ‍್ಯಾಲಿಗಳನ್ನು ನಿಷೇಧಿಸುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೈರ್ಯ ಪ್ರದರ್ಶಿಸಲಿ, ಮುಚ್ಚುಮರೆ ಬೇಡ: ಜೆಸಿ ಮಾಧುಸ್ವಾಮಿ

ರ‍್ಯಾಲಿಗಳನ್ನು ನಿಷೇಧಿಸುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೈರ್ಯ ಪ್ರದರ್ಶಿಸಲಿ, ಮುಚ್ಚುಮರೆ ಬೇಡ: ಜೆಸಿ ಮಾಧುಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 05, 2024 | 6:50 PM

ಅಸಲಿಗೆ, ಐಜೆಪಿಯವರು ಧಾರವಾಡ ಹೈಕೋರ್ಟ್ ಆದೇಶವನ್ನು ಎಲ್ಲ ಪೊಲೀಸರಿಗೆ ವಾಟ್ಸ್ಯಾಪ್ ಮಾಡಿದ್ದರು. ಹಾಗಾಗಿ ಎಲ್ಲ ಕಡೆ ರ‍್ಯಾಲಿಗಳನ್ನು ತಡೆಯಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಮುಚ್ಚುಮರೆಯಿಂದ ರ‍್ಯಾಲಿಗಳನ್ನು ಬ್ಯಾನ್ ಮಾಡುವ ಬದಲು ತಾಕತ್ತಿದ್ದರೆ ನೇರವಾಗಿ ತಮ್ಮ ಕಚೇರಿಯಿಂದ ಆದೇಶ ಹೊರಡಿಸಿ ಬ್ಯಾನ್ ಮಾಡಲಿ ಎಂದು ಮಾಧುಸ್ವಾಮಿ ಸವಾಲೆಸೆದರು.

ತುಮಕೂರು: ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಸಾರ್ವಜನಿಕ ಬದುಕಿನಿಂದ ಅದೃಶ್ಯರಾದಂತಿದ್ದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ (JC Madhu Swamy), ಬಹಳ ದಿನಗಳ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದರು. ರಾಮಮಂದಿರ ಪ್ರಾಣ ಪ್ರತಿಷ್ಠೆಯ (Ram Mandir Consecration) ದಿನ ಕರ್ನಾಟಕದಲ್ಲಿ ರ‍್ಯಾಲಿಗಳನ್ನು ಬ್ಯಾನ್ ಮಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಅವರು ಬೆಳಕು ಚೆಲ್ಲಿದರು. ಅಸಲಿಗೆ ಅವತ್ತು ಮೆರವಣಿಗೆಗಳನ್ನು (procession) ಬ್ಯಾನ್ ಮಾಡಬೇಕೆನ್ನುವುದು ಸಮಗ್ರ ಕರ್ನಾಟಕಕ್ಕೆ ಅನ್ವಯಿಸುವ ಆದೇಶವಾಗಿರಲಿಲ್ಲ. ಧಾರವಾಡದಲ್ಲಿ ವ್ಯಕ್ತಿಯೊಬ್ಬರು ರ‍್ಯಾಲಿ ನಡೆಸಲು ಅನುಮತಿ ಕೋರಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು, ಅವರ ಅರ್ಜಿಯನ್ನಷ್ಟೇ ಕೋರ್ಟ್ ತಿರಸ್ಕರಿಸಿತ್ತು ಎಂದು ಹೇಳಿದ ಮಾಧುಸ್ವಾಮಿ, ತಮ್ಮ ಕಾರ್ಯಕರ್ತರು ರ‍್ಯಾಲಿಗೆ ಯಾಕೆ ಅನುಮತಿ ನೀಡುತ್ತಿಲ್ಲ ಅಂತ ತಮ್ಮನ್ನು ಕೇಳಿದಾಗ ಅವರು ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗೆ ಫೋನಾಯಿಸಿ ವಿಚಾರಿಸಿದರಂತೆ. ಎಸ್ ಪಿ ಅವರು ಅವರ ಮೇಲಿಂದ ಆದೇಶ ಬಂದಿದೆ ಅಂತ ತಿಳಿಸಿದರು ಅಂತ ಮಾಧುಸ್ವಾಮಿ ಹೇಳಿದರು. ಅಸಲಿಗೆ, ಐಜೆಪಿಯವರು ಧಾರವಾಡ ಹೈಕೋರ್ಟ್ ಆದೇಶವನ್ನು ಎಲ್ಲ ಪೊಲೀಸರಿಗೆ ವಾಟ್ಸ್ಯಾಪ್ ಮಾಡಿದ್ದರು. ಹಾಗಾಗಿ ಎಲ್ಲ ಕಡೆ ರ‍್ಯಾಲಿಗಳನ್ನು ತಡೆಯಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಮುಚ್ಚುಮರೆಯಿಂದ ರ‍್ಯಾಲಿಗಳನ್ನು ಬ್ಯಾನ್ ಮಾಡುವ ಬದಲು ತಾಕತ್ತಿದ್ದರೆ ನೇರವಾಗಿ ತಮ್ಮ ಕಚೇರಿಯಿಂದ ಆದೇಶ ಹೊರಡಿಸಿ ಬ್ಯಾನ್ ಮಾಡಲಿ ಎಂದು ಮಾಧುಸ್ವಾಮಿ ಸವಾಲೆಸೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ