AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿ ಬಯಸಿದ್ದು, ಡಾಕ್ಟರ್ ಹೇಳಿದ್ದು ಹಾಲು: ಜಾರಕಿಹೊಳಿ ಬ್ರದರ್ಸ್ ವಿರೋಧಿ ಬಣದ ಸವದಿ ಹ್ಯಾಪಿ

ರೋಗಿ ಬಯಸಿದ್ದು, ಡಾಕ್ಟರ್ ಹೇಳಿದ್ದು ಹಾಲು: ಜಾರಕಿಹೊಳಿ ಬ್ರದರ್ಸ್ ವಿರೋಧಿ ಬಣದ ಸವದಿ ಹ್ಯಾಪಿ

ರಮೇಶ್ ಬಿ. ಜವಳಗೇರಾ
|

Updated on:Nov 10, 2025 | 4:59 PM

Share

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಾರಕೊಹೊಳಿ ಬ್ರದರ್ಸ್​​​ ಬಣದ ಅಣ್ಣಾ ಸಾಹೇಬ್ ಜೊಲ್ಲೆ ಹಾಗೂ ಉಪಾಧ್ಯಕ್ಷರಾಗಿ ರಾಜು ಕಾಗೆ ಆಯ್ಕೆಯಾಗಿದ್ದಾರೆ. ಇನ್ನು ಈ ಬಗ್ಗೆ ವಿರೋಧ ಬಣದ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದು, ನನ್ನ ಆತ್ಮೀಯರೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಬಣಕ್ಕೆ ವಿರುದ್ಧವಾಗಿ ಇದ್ದಿದ್ದು ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಶಾಸಕ ಲಕ್ಷ್ಮಣ್ ಸವದಿ. ಈಗ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಾ ಸಾಹೇಬ್ ಜೊಲ್ಲೆ ಹಾಗೂ ಉಪಾಧ್ಯಕ್ಷರಾಗಿ ರಾಜು ಕಾಗೆ ಆಯ್ಕೆಯಾಗಿದ್ದಕ್ಕೆ ಶಾಸಕ ಲಕ್ಷ್ಮಣ್ ಸವದಿ ಸಹ ಖುಷಿ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, (ನವೆಂಬರ್ 10): ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಾರಕೊಹೊಳಿ ಬ್ರದರ್ಸ್​​​ ಬಣದ ಅಣ್ಣಾ ಸಾಹೇಬ್ ಜೊಲ್ಲೆ ಹಾಗೂ ಉಪಾಧ್ಯಕ್ಷರಾಗಿ ರಾಜು ಕಾಗೆ ಆಯ್ಕೆಯಾಗಿದ್ದಾರೆ. ಇನ್ನು ಈ ಬಗ್ಗೆ ವಿರೋಧ ಬಣದ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದು, ನನ್ನ ಆತ್ಮೀಯರೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಬಣಕ್ಕೆ ವಿರುದ್ಧವಾಗಿ ಇದ್ದಿದ್ದು ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಶಾಸಕ ಲಕ್ಷ್ಮಣ್ ಸವದಿ. ಈಗ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಾ ಸಾಹೇಬ್ ಜೊಲ್ಲೆ ಹಾಗೂ ಉಪಾಧ್ಯಕ್ಷರಾಗಿ ರಾಜು ಕಾಗೆ ಆಯ್ಕೆಯಾಗಿದ್ದಕ್ಕೆ ಶಾಸಕ ಲಕ್ಷ್ಮಣ್ ಸವದಿ ಸಹ ಖುಷಿ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಲಕ್ಷ್ಮಣ ಸವದಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ವಿಚಾರದಲ್ಲಿ ನನ್ನ ಲೆಕ್ಕಾಚಾರ ತಪ್ಪಾಗಲಿಲ್ಲ . ನನ್ನ ಲೆಕ್ಕ ರಾಜಕೀಯದಲ್ಲಿ ತಪ್ಪಾಗಿಲ್ಲ .ಯಾವಾಗಲೂ ಗುಣಾಕಾರ, ಭಾಗಾಕಾರ ತಪ್ಪಾಗಿಲ್ಲ . ನಾನು ಬರೆದಿಟ್ಟುಕೊಂಡು ಚೋಪಡಿ, ಗಣಿತದಲ್ಲಿ ನಾನು ಎಲ್ಲರಿಗಿಂತ‌ ಮುಂದೆ ಇದ್ದೇನೆ . ಜಿಲ್ಲೆಯ ಸಹಕಾರ ಬ್ಯಾಂಕ್ ಚುನಾವಣೆ ಸಾಕಷ್ಟು ಸದ್ದು ಮಾಡಿತ್ತು . ರೋಗಿ ‌ಬಯಸಿದ್ದು, ಡಾಕ್ಟರ್ ಹೇಳಿದ್ದು ಹಾಲು . ಬ್ಯಾಂಕಿನಲ್ಲಿ ಒಳ್ಳೆಯ ಆಡಳಿತ ನೀಡುವವರು ಅಧ್ಯಕ್ಷರಾಗಿರುವುದು ವೈಯುಕ್ತಿಕವಾಗಿ ಸಂತೋಷವಾಗಿದೆ ಎಂದರು.

ನನ್ನ ಆತ್ಮೀಯರೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ . ಅಣ್ಣಾಸಾಹೇಬ್ ಜೊಲ್ಲೆ ಹಾಗೂ ರಾಜು ಕಾಗೆಗೆ ಸಂಪೂರ್ಣ ಸಹಕಾರ ನೀಡುವೆ. ಜನರಲ್ಲಿರುವ ಆತಂಕ ದೂರವಾಗಿದೆ. ನಾವೆಲ್ಲರೂ ಸಹಕಾರ ಕೊಡುತ್ತೇವೆ . ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ . ಅಣ್ಣಾಸಾಹೇಬ್ ಜೊಲ್ಲೆ ಹಾಗೂ ರಾಜು ಕಾಗೆ ಡಿಸಿಸಿ ಬ್ಯಾಂಕ್ ಗೆ ಸೂಕ್ತ ವ್ಯಕ್ತಿಗಳು . ನನ್ನ ಮಾರ್ಗದರ್ಶನ, ಸಲಹೆಗಳನ್ನು ಇಬ್ಬರಿಗೂ ಮುಂದುವರೆಸುವೆ. ಎಲ್ಲರೂ ಸೇರಿಕೊಂಡು ಸಹಕಾರ ಕ್ಷೇತ್ರವನ್ನು ನಂಬರ್ ಒನ್ ಸ್ಥಾನ ಮಾಡುತ್ತೇವೆ . ಡಿಸಿಸಿ ಬ್ಯಾಂಕ್ ಚುನಾವಣೆಯ ಅಧ್ಯಕ್ಷ, ಉಪಾಧ್ಯಕ್ಷ ಅಯ್ಕೆಯಲ್ಲಿ ಯಾರಿಗೂ ಗೊಂದಲ ಇಲ್ಲ. ನಮ್ಮಲ್ಲಿ ಯಾವುದೇ ತರಹದ ಭಿನ್ನಾಭಿಪ್ರಾಯ ಇಲ್ಲ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.

Published on: Nov 10, 2025 04:58 PM