ಪರಿಷತ್​ ಸದಸ್ಯರ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮುಖ್ಯಮಂತ್ರಿಗಳ ಕಾಲುಮುಟ್ಟಿ ನಮಸ್ಕರಿಸಿ ಗಮನ ಸೆಳೆದರು

ನೂತನ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದ ನಂತರ ತಮ್ಮ ಸಹೋದರನೊಂದಿಗೆ ವೇದಿಕೆ ಮೇಲಿದ್ದ ಲಕ್ಷ್ಮಿ ಅವರು ಮುಖ್ಯಮಂತ್ರಿಗಳ ಕಾಲು ಮುಟ್ಟಿ ನಮಸ್ಕರಿಸಿದರು. ಶಾಸಕಿಯ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

TV9kannada Web Team

| Edited By: Arun Belly

Jan 07, 2022 | 1:22 AM

ರಾಜಕೀಯದಲ್ಲಿ ಬೇರೆ ಬೇರೆ ಪಕ್ಷಗಳ ನಾಯಕರ ನಡುವೆ ಹಣಾಹಣಿ, ವೈರತ್ವ, ಕಿತ್ತಾಟ ಪರಸ್ಪರ ಕೆಸರೆರಚಾಟ ಇರುವುದು ನಿಜವಾದರೂ ಕೆಲ ನಾಯಕರ ನಡುವೆ ಆದರ-ಗೌರವಗಳೂ ಇರುತ್ತವೆ. ಅದು ಇರಬೇಕಾದದ್ದೇ. ಕ್ರೀಡಾರಂಗದಲ್ಲಿ ಮಹಾನ್ ಅಥ್ಲೀಟ್​​ಗಳು ಕೇವಲ ಕಣದಲ್ಲಿ ಮಾತ್ರ ವೈರಿಗಳು, ಹೊರಗಡೆ ಆತ್ಮೀಯ ಸ್ನೇಹಿತರು. ಸಚಿನ್​ ತೆಂಡೂಲ್ಕರ್-ಬ್ರಿಯಾನ್ ಲಾರಾ, ವಿರಾಟ್​ ಕೊಹ್ಲಿ-ಕೇನ್​ ವಿಲಿಯಮ್ಸನ್​ ಮೊದಲಾದವರ ನಡುವಿನ ರೈವಲ್ರೀ ಮತ್ತು ಸ್ನೇಹ ನಮಗೆ ಚೆನ್ನಾಗಿ ಗೊತ್ತು. ಇಂಥ ಕಾಮರಾಡರೀ ಕೇವಲ ಕ್ರಿಕೆಟ್​​ ನಲ್ಲಿ ಮಾತ್ರ ಅಲ್ಲ, ಇತರ ಕ್ರೀಡೆಗಳಲ್ಲೂ ಕಾಣಸಿಗುತ್ತದೆ. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ವಿದಾನ ಪರಿಷತ್​​​​ಗೆ ಆಯ್ಕೆಯಾಗಿರುವ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಗುರುವಾರದಂದು ವಿಧಾನ ಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆದಾಗ ಒಂದು ಅಪರೂಪದ ಮತ್ತು ಅಷ್ಟೇ ಅಪ್ಯಾಯಮಾನವಾದ ದೃಶ್ಯವೊಂದು ಎಲ್ಲರ ಗಮನ ಸೆಳೆಯಿತು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ತಮ್ಮ ವರ್ಚಿಸ್ಸಿನ ಬಲದಿಂದಲೇ ಅವರು ತಮ್ಮ ಸಹೋದರ ಚನ್ನರಾಜ ಎಚ್​ ಅವರನ್ನು ಪರಿಷತ್​​​ಗೆ ನಡೆದ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಭಾಗವಹಿಸಿದ್ದರು.

ನೂತನ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದ ನಂತರ ತಮ್ಮ ಸಹೋದರನೊಂದಿಗೆ ವೇದಿಕೆ ಮೇಲಿದ್ದ ಲಕ್ಷ್ಮಿ ಅವರು ಮುಖ್ಯಮಂತ್ರಿಗಳ ಕಾಲು ಮುಟ್ಟಿ ನಮಸ್ಕರಿಸಿದರು. ಶಾಸಕಿಯ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪರಿಷತ್​ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಮೇಲೆ ಚನ್ನರಾಜ ಅವರನ್ನು ಕೆಪಿಸಿಸಿ ಕಚೇರಿಗೆ ಕರೆದುಕೊಂಡು ಹೋದಾಗಲೂ ಲಕ್ಷ್ಮಿ ತಮ್ಮ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲು ಮುಟ್ಟಿ ನಮಸ್ಕರಿಸಿದ್ದರು.

ಹಿರಿಯರಿಗೆ ಗೌರವಸೂಚಕವಾಗಿ ಕಾಲುಮುಟ್ಟಿ ನಮಸ್ಕಾರ ಮಾಡುವುದು ಭಾರತೀಯ ಸಂಸ್ಕೃತಿಯಾಗಿದೆ.

ಇದನ್ನೂ ಓದಿ:    ಸಲ್ಮಾನ್​ ಖಾನ್​ಗೆ ಸಿಕ್ಸ್​ ಪ್ಯಾಕ್​ ಇರೋದು ನಿಜವೇ? ಒಂದು ವಿಡಿಯೋದಿಂದ ಬಯಲಾಯ್ತು ಸತ್ಯ

Follow us on

Click on your DTH Provider to Add TV9 Kannada