ರಸ್ತೆ ಗುಂಡಿಗಳಿಗೆ ಬಿಜೆಪಿಯೇ ಕಾರಣ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್
ರಾಜ್ಯಾದ್ಯಂತ ಉಂಟಾಗಿರುವ ರಸ್ತೆ ಗುಂಡಿಗಳ ವಿಚಾರವಾಗಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ಬಗ್ಗೆ ಕಿಡಿ ಕಾರಿರುವ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಅಧಿಕಾರದ ಸಂದರ್ಭ ನಿರ್ಮಿಸಲಾದ ಅವೈಜ್ಞಾನಿಕ ರಸ್ತೆಗಳೇ ಈ ಸಮಸ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ. ದೆಹಲಿಯ ರಸ್ತೆಗಳ ಸ್ಥಿತಿ ಹೇಗಿದೆ ಗೊತ್ತಾ ಎಂದೂ ಬಿಜೆಪಿಗರನ್ನ ಪ್ರಶ್ನಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 24: ರಸ್ತೆ ಗುಂಡಿಗಳ ವಿಚಾರವಾಗಿ ಬಿಜೆಪಿಗರ ಆರೋಪಕ್ಕೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ. ಅವೈಜ್ಞಾನಿಕ ರಸ್ತೆಗಳ ನಿರ್ಮಾಣ ಆಗಿರೋದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಹೀಗಾಗಿಯೇ ರಸ್ತೆಗಳು ಗುಂಡಿ ಬಿದ್ದಿವೆ. ವಿಜಯೇಂದ್ರಣ್ಣ ನಿಮ್ಮ ತಂದೆಯವರೂ ಸಿಎಂ ಆಗಿದ್ದರು ಅಲ್ವಾ? ಆಗ ಗುಂಡಿಗಳ ಮೇಲೆ ನಿಮಗೆ ಪ್ರೀತಿ ಇರಲಿಲ್ವಾ ಎಂದು ಪ್ರದೀಪ್ ಪ್ರಶ್ನಿಸಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ಗೂ ತಿರುಗೇಟು ನೀಡಿರುವ ಶಾಸಕ ಪ್ರದೀಪ್ ಈಶ್ವರ್, ನೀವು ಎಲ್ಲ ಖಾತೆಗಳನ್ನ ನಿರ್ವಹಿಸಿದ್ದೀರಿ ಅಶೋಕ್ ಅಣ್ಣ. ದೆಹಲಿಯ ಹಲವೆಡೆ ಸಾಕಷ್ಟು ರಸ್ತೆಗುಂಡಿಗಳು ಬಿದ್ದಿವೆ. ದೆಹಲಿ ಸಿಎಂ ಮನೆಯ ಅಕ್ಕ ಪಕ್ಕದ ರಸ್ತೆಗಳಲ್ಲಿಯೇ ಗುಂಡಿಗಳಿವೆ. ಅಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ನಿಮ್ಮದೆ. ಹೀಗಿರುವಾಗ ನಮ್ಮ ಬಗ್ಗೆ ಏನು ಮಾತಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನ ನೋಡಲು ಇಲ್ಲಿ ಕ್ಲಿಕ್ ಮಾಡಿ.
