ರಾಮನಗರದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ ಮುಸ್ಲಿಂ ಶಾಸಕ, ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ರೇಷ್ಮೆನಗರಿ ರಾಮನಗರದಲ್ಲಿ (Ramanagara( ನಾಲ್ಕು ದಿನ ರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಇಂದು (ಜನವರಿ 15( ಮಕರ ಸಂಕ್ರಾಂತಿ ದಿನದಂದು ಶ್ರೀ ರಾಮತಾರಕ ಜಪ ಯಜ್ಞ ಪೂಜೆ ಮಾಡಲಾಗಿದೆ. ಅಚ್ಚರಿ ಅಂದ್ರೆ ಈ ಪೂಜೆಯಲ್ಲಿ ಮುಸ್ಲಿಂ ಶಾಸಕ ಇಕ್ಬಾಲ್ ಹುಸೇನ್ ಪಾಲ್ಗೊಂಡಿದ್ದು, ರಾಮನಿಗೆ ಪೂಜೆ ಸಲ್ಲಿಸಿ ಗಮನಸೆಳೆದಿದ್ದಾರೆ.
ರಾಮನಗರ, (ಜನವರಿ 15): ರೇಷ್ಮೆನಗರಿ ರಾಮನಗರದಲ್ಲಿ (Ramanagara( ನಾಲ್ಕು ದಿನ ರಾಮೋತ್ಸವ (ramotsav) ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಇಂದು (ಜನವರಿ 15( ಮಕರ ಸಂಕ್ರಾಂತಿ ದಿನದಂದು ಶ್ರೀ ರಾಮತಾರಕ ಜಪ ಯಜ್ಞ ಪೂಜೆ ಮಾಡಲಾಗಿದೆ. ಅಚ್ಚರಿ ಅಂದ್ರೆ ಈ ಪೂಜೆಯಲ್ಲಿ ಮುಸ್ಲಿಂ ಶಾಸಕ ಇಕ್ಬಾಲ್ ಹುಸೇನ್ (Congress MLA Iqbal Hussain) ಪಾಲ್ಗೊಂಡಿದ್ದು, ರಾಮನಿಗೆ ಪೂಜೆ ಸಲ್ಲಿಸಿ ಗಮನಸೆಳೆದಿದ್ದಾರೆ.
ಇನ್ನು ಈ ಬಗ್ಗೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಇತಿಹಾಸದ ಪುಟದಲ್ಲಿ ಬರೆಯುವ ರಾಮೋತ್ಸವ ಕಾರ್ಯಕ್ರಮವನ್ನು ಜಾತ್ಯತೀತವಾಗಿ ಮಾಡುತ್ತಿದ್ದೇವೆ. ಅದಕ್ಕಾಗಿ ರಾಮತಾರಕ ಯಜ್ಞ ಪೂಜೆಯನ್ನು ಹಿಂದೂಧರ್ಮ ಕಾಪಾಡಲೂ ಮಾಡಿದ್ದೇವೆ. ಜಗತ್ತಿನಲ್ಲಿ ದೇವನೊಬ್ಬ ನಾಮ ಹಲವು. ಎಲ್ಲ ಧರ್ಮವನ್ನು ಗೌರವಿಸಬೇಕು. ಹೀಗಾಗಿ ಕ್ಷೇತ್ರದ ಶಾಸಕನಾಗಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ರಾಮನಗರಕ್ಕೆ ಸಾಕಷ್ಟು ಇತಿಹಾಸ ಇದೆ. ರಾಮ ವನವಾಸದ ಕಾಲದಲ್ಲಿ ರಾಮನಗರಕ್ಕೆ ಬಂದಿದ್ದ.ಇತಿಹಾಸವುಳ್ಳ ಪವಿತ್ರ ಭೂಮಿ. ಹಿಂದೂ ಧರ್ಮದ ಸಂಪತ್ತು ಇದು ಯುವ ಪೀಳಿಗೆಗೆ ತಿಳಿಸಬೇಕು. ಆಗ ಮಾತ್ರ ಹಿಂದೂಧರ್ಮದ ಸಂಪತ್ತು ಉಳಿಸಿಕೊಳ್ಳಲು ಸಾಧ್ಯ. ಎಲ್ಲ ದೇಹದಲ್ಲಿ ಒಂದೇ ರಕ್ತ. ನಾನೂ ಮಸೀದಿಗೂ ಹೋಗುತ್ತೇನೆ. ಹಿಂದೂ ದೇವರಿಗೂ ಪೂಜೆ ಮಾಡುತ್ತೇನೆ ಎಂದು ಹೇಳಿದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
