Bengaluru: ಕಾಂಗ್ರೆಸ್ ನಿಂದ ಪೋಸ್ಟರ್ ಅಭಿಯಾನ ಪುನರಾರಂಭ, ಬಿಜೆಪಿಯೇ ಭರವಸೆ ಪೋಸ್ಟರ್ಗಳ ಮೇಲೆ ಸಾಕಪ್ಪಾ ಸಾಕು ಕಿವಿ ಮೇಲೆ ಹೂವ ಪೋಸ್ಟರ್ಗಳು
ಬಿಜೆಪಿಯೇ ಭರವಸೆ ಪೋಸ್ಟರ್ ಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ರಾತ್ರೋರಾತ್ರಿ ಸಾಕಪ್ಪಾ ಸಾಕು ಕಿವಿ ಮೇಲೆ ಹೂವ ಎಂದು ಮುದ್ರಿಸಿರುವ ಪೋಸ್ಟರ್ ಗಳನ್ನು ಮೆತ್ತಿದ್ದಾರೆ.
ಬೆಂಗಳೂರು: ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ಕಾಂಗ್ರೆಸ್ ಪಕ್ಷದ ಪೋಸ್ಟರ್ ಅಭಿಯಾನ (Poster Campaign)ಮತ್ತೇ ಶುರುವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನಿನ್ನೆ ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸುವಾಗ ನಡೆದ ಕಿವಿ ಮೇಲೆ ಹೂ ಸನ್ನಿವೇಶ ಕಾಂಗ್ರೆಸ್ ಕಾರ್ಯಕರ್ತರಿಗೆ (Congress Workers) ಪ್ರೇರಣೆ ಒದಗಿಸಿರಬಹುದು. ಬೆಂಗಳೂರು ನಗರದೆಲ್ಲೆಡೆ ಅಂಟಿಸಲಾಗಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಗಳನ್ನು ಒಳಗೊಂಡ ಬಿಜೆಪಿಯೇ ಭರವಸೆ ಪೋಸ್ಟರ್ ಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ರಾತ್ರೋರಾತ್ರಿ ಸಾಕಪ್ಪಾ ಸಾಕು ಕಿವಿ ಮೇಲೆ ಹೂವ ಎಂದು ಮುದ್ರಿಸಿರುವ ಪೋಸ್ಟರ್ ಗಳನ್ನು ಮೆತ್ತಿದ್ದಾರೆ. ಪೋಸ್ಟರ್ ಯುದ್ಧ ಇನ್ನು ಪೂರ್ಣಪ್ರಮಾಣದಲ್ಲಿ ನಡೆಯೋದು ಮಾತ್ರ ಸತ್ಯ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

