ಸಿಎಂ ಹುದ್ದೆ ರೇಸ್ನಲ್ಲಿರುವ ಸತೀಶ್ ಜಾರಕಿಹೊಳಿಯನ್ನು ಇಂಪ್ರೆಸ್ ಮಾಡುವ ಕೆಲಸ ಶುರುವಾಗಿದೆ!
ಮುಡಾ ಹಗರಣದ ಆರೋಪದಲ್ಲಿ ಸಿಕ್ಕು ಒದ್ದಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ರಾಜೀನಾಮೆ ಸಲ್ಲಿಸುವ ಪ್ರಶ್ನೆಯೇ ಉದ್ಭವಿಸಲ್ಲ ಅಂತ ಹತ್ತಾರು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ ರಾಜ್ಯದ ಕೆಲ ಪ್ರಭಾವಿ ನಾಯಕರು ಹೈಕಮಾಂಡನ್ನು ಭೇಟಿ ಮಾಡಿ ಇಂಪ್ರೆಸ್ ಮಾಡುವ ಕೆಲಸ ಮಾಡುತ್ತಿದ್ದಾರೆ.
ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಅಂತಾದರೆ ಸ್ಥಾನಕ್ಕಾಗಿ ರೇಸ್ನಲ್ಲಿರುವ ಪ್ರಮುಖರ ಪೈಕಿ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಒಬ್ಬರು. ಇಂದು ಮೈಸೂರಿಗೆ ತೆರಳಿದ್ದ ಸಚಿವ ಕಾರ್ಯಕರ್ತನೊಬ್ಬನ ಮನೆಯಲ್ಲಿ ದೋಸೆ ಮತ್ತು ಪೊಂಗಲ್ ಅನ್ನು ಉಪಹಾರವಾಗಿ ಸೇವಿಸಿದರು. ಅವರು ತಿಂಡಿ ತಿನ್ನುತ್ತಿದ್ದಾಗ ಸುತ್ತ ನೆರೆದಿದ್ದ ಕಾರ್ಯಕರ್ತರು ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮತ್ತೊಮ್ಮೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು; ಮುಖ್ಯಮಂತ್ರಿ ರೇಸ್ನಲ್ಲಿ ಸತೀಶ್ ಜಾರಕಿಹೊಳಿ ಹೆಸರು!