ಸಚಿವ ಸೋಮಶೇಖರ್ ಗೂ ಕಪ್ಪುಬಾವುಟ ಪ್ರದರ್ಶನದ ಬಿಸಿ, ಮೈಸೂರು ಕಲಾಮಂದಿರದ ಹಿಂಬಾಗಿಲಿನಿಂದ ಅವರು ಹೊರಬಂದರು!

ಸಚಿವ ಸೋಮಶೇಖರ್ ಗೂ ಕಪ್ಪುಬಾವುಟ ಪ್ರದರ್ಶನದ ಬಿಸಿ, ಮೈಸೂರು ಕಲಾಮಂದಿರದ ಹಿಂಬಾಗಿಲಿನಿಂದ ಅವರು ಹೊರಬಂದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 20, 2022 | 3:48 PM

ಪ್ರತಿಭಟನೆಕಾರರನ್ನು ಪೊಲೀಸರು ಚದುರಿಸಿದರಾದರೂ ಸೋಮಶೇಖರ್ ಕಲಾಮಂದಿರದ ಹಿಂಬಾಗಿಲಿನಿಂದ ಹೊರಬಿದ್ದರು.

ಮೈಸೂರು: ಮಡಿಕೇರಿಯಲ್ಲಿ ಸಿದ್ದರಾಮಯ್ಯನವರ (Siddaramaiah) ಮೊಟ್ಟೆ ಎಸೆದ ಪ್ರಕರಣದ ನಂತರ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಶನಿವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ (ST Somashekhar) ಅವರು ನಗರದ ಕಲಾಮಂದಿರದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದಾಗ ಮೈಸೂರು ಗ್ರಾಮಾಂತರ ಅಧ್ಯಕ್ಷ ಬಿಜೆ ವಿಜಯಕುಮಾರ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರು. ಪ್ರತಿಭಟನೆಕಾರರನ್ನು ಪೊಲೀಸರು ಚದುರಿಸಿದರಾದರೂ ಸೋಮಶೇಖರ್ ಕಲಾಮಂದಿರದ ಹಿಂಬಾಗಿಲಿನಿಂದ ಹೊರಬಿದ್ದರು.