ಮುದ್ದಹನುಮಗೌಡರ ಪರ ಮತಬೇಟೆ ಈಗಿಂದಲೇ ಆರಂಭಿಸಿದ ಸಚಿವ ರಾಜಣ್ಣ, ಟಿಕೆಟ್ ಸಿಗೋದು ಗ್ಯಾರಂಟಿಯೇ?

ರಾಜ್ಯದಲ್ಲಿ ಬಡವರು ಬರಿ ಹೊಟ್ಟೆಯಲ್ಲಿರಬಾರದು, ಯಾರೂ ಹಸಿಯಬಾರದು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ರಾಜಣ್ಣ ಹೇಳಿದ್ದಾರೆ. ಸಹಕಾರ ಸಚಿವ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯವನ್ನು ಈಗಿಂದಲೇ ಶುರು ಮಾಡಿದಂತಿದೆ.

ಮುದ್ದಹನುಮಗೌಡರ ಪರ ಮತಬೇಟೆ ಈಗಿಂದಲೇ ಆರಂಭಿಸಿದ ಸಚಿವ ರಾಜಣ್ಣ, ಟಿಕೆಟ್ ಸಿಗೋದು ಗ್ಯಾರಂಟಿಯೇ?
|

Updated on:Feb 01, 2024 | 11:15 AM

ತುಮಕೂರು: ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ (SP Muddahanumegowda) ಕಾಂಗ್ರೆಸ್ ಪಕ್ಷ ಸೇರೋದು ಮತ್ತು ಪಕ್ಷದ ಟಿಕೆಟ್ ನಿಂದ ಮುಂಬರುವ ಲೋಕಸಭಾ ಚುನಾವನಣೆಯಲ್ಲಿ ತುಮಕೂರು ಕ್ಷೇತ್ರದಿಂದ (Tumakuru Constituency ) ಸ್ಪರ್ಧಿಸುವುದು ಖಚಿತವೇ? ಇವತ್ತು ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಮಧುಗಿರಿಯ ಗುಟ್ಟೆ ಗ್ರಾಮದಲ್ಲಿ ಮಾತಾಡಿದ್ದನ್ನು ಕೇಳಿದರೆ ಹೌದೆನಿಸುತ್ತದೆ. ಇನ್ ಫ್ಯಾಕ್ಟ್ ಅವರು ಮುದ್ದಹನುಮಗೌಡರ ಪರವಾಗಿ ಪ್ರಚಾರವನ್ನೂ ಶುರುಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ, ಹಾಗಾಗಿ ನೀವೆಲ್ಲ ಅವರಿಗೆ ಮಾತ್ರ ವೋಟು ಹಾಕಬೇಕು ಮತ್ತು ಭರ್ಜರಿ ಬಹುಮತದೊಂದಿಗೆ ಗೆಲ್ಲಿಸಬೇಕು, ಬೇರೆ ಪಕ್ಷಗಳ ಬಗ್ಗೆ ಯೋಚನೆ ಕೂಡ ಮಾಡದೆ ಮುದ್ದಹನುಮೇಗೌಡರ ಪರ ಮತ ಚಲಾಯಿಸಬೇಕು ಅಂತ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಬಡವರು ಬರಿ ಹೊಟ್ಟೆಯಲ್ಲಿರಬಾರದು, ಯಾರೂ ಹಸಿಯಬಾರದು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ರಾಜಣ್ಣ ಹೇಳಿದ್ದಾರೆ. ಸಹಕಾರ ಸಚಿವ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯವನ್ನು ಈಗಿಂದಲೇ ಶುರು ಮಾಡಿದಂತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:12 am, Thu, 1 February 24

Follow us