ಸರ್ಕಾರ ಪತನದ ಕ್ಷಣಗಣನೆ ಆರಂಭವಾಗಿದೆ, ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಉರುಳುತ್ತೆ: ಅರ್ ಅಶೋಕ

|

Updated on: May 10, 2024 | 5:53 PM

ಮುಂದುವರಿದು ಮಾತಾಡುವ ಅವರು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ, ಹಾಗಾಗಿ, ಕಾಂಗ್ರೆಸ್ ಶಾಸಕರೇ ತುಂಬಾ ಬೇಸರದಲ್ಲಿದ್ದಾರೆ, ಬರಪರಿಹಾರ ನೆರವು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದು ಬಿಟ್ಟರೆ ರಾಜ್ಯ ಸರ್ಕಾರ ಒಂದು ರೂಪಾಯಿಯನ್ನೂ ರೈತರಿಗೆ ನೀಡಿಲ್ಲ ಎಂದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ (R Ashoka) ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ (Siddaramaiah government) ಪತನಗೊಳ್ಳೋದು ಗ್ಯಾರಂಟಿ ಎಂದು ಹೇಳಿದರು. ಅಶೋಕ ಆಡುವ ಮಾತನ್ನು ಕೇಳಿಸಿಕೊಳ್ಳಿ, ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ 30 ಕೋಟಿ 50 ಕೋಟಿ ರೂ. ಗಳ ಅಮಿಶ ಒಡ್ಡುತ್ತಿದ್ದಾರೆ ಅಂತ ಯತೀಂದ್ರ ಸಿದ್ದರಾಮಯ್ಯನೇ (Yathindra Siddaramaiah) ಹೇಳುತ್ತಿದ್ದಾರೆ ಅನ್ನುತ್ತಾರೆ. ಅಂದರೆ ಬಿಜೆಪಿ ಆಮಿಶ ಒಡ್ಡುತ್ತಿರುವುದು ನಿಜ ಅಂತ ಅಶೋಕ ಸಾರ್ವಜನಿಕವಾಗಿ ಒಪ್ಪಿಕೊಂಡಂತಾಗಲಿಲ್ಲವೇ? ಹಿಂದೊಮ್ಮೆ ಸರ್ಕಾರವನ್ನು ಉರುಳಿಸಿ ತೋರಿಸಿದ್ದೀವಲ್ಲ ಅಂತಲೂ ಅವರು ಎದೆಯುಬ್ಬಿಸಿ ಹೇಳುತ್ತಾರೆ! ಮುಂದುವರಿದು ಮಾತಾಡುವ ಅವರು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ, ಹಾಗಾಗಿ, ಕಾಂಗ್ರೆಸ್ ಶಾಸಕರೇ ತುಂಬಾ ಬೇಸರದಲ್ಲಿದ್ದಾರೆ, ಬರಪರಿಹಾರ ನೆರವು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದು ಬಿಟ್ಟರೆ ರಾಜ್ಯ ಸರ್ಕಾರ ಒಂದು ರೂಪಾಯಿಯನ್ನೂ ರೈತರಿಗೆ ನೀಡಿಲ್ಲ ಎಂದರು. ಜನರು ಇದೊಂದು ಪಾಪಿ ಸರ್ಕಾರ ಎಂದು ಹೇಳುತ್ತಿದ್ದಾರೆ, ಇದು ನಿಸ್ಸಂದೇಹವಾಗಿ ಬಡವರ ವಿರೋಧಿ ಮತ್ತು ಮಜಾವಾದಿ ಸರ್ಕಾರ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಇದು ನಾಲಾಯಕ್ ಸರ್ಕಾರ, ಸಿದ್ದರಾಮಯ್ಯರ ಇಳಿಸುವ ಗ್ಯಾಂಗ್ ಕಾಂಗ್ರೆಸ್​​ನಲ್ಲೇ ಇದೆ: ಅಶೋಕ್ ವಾಗ್ದಾಳಿ

Follow us on