AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆಯಾಯ್ತು ವಿಚಿತ್ರ ಫ್ಯಾಮಿಲಿಯ ಕೃತ್ಯ

ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆಯಾಯ್ತು ವಿಚಿತ್ರ ಫ್ಯಾಮಿಲಿಯ ಕೃತ್ಯ

ಜಗದೀಶ ಬಿ.
| Edited By: ಆಯೇಷಾ ಬಾನು|

Updated on: Jul 01, 2024 | 8:01 AM

Share

ಓರ್ವ ಮಹಿಳೆ ಹಾಗೂ ಓರ್ವ ವ್ಯಕ್ತಿ ತಡರಾತ್ರಿ ಕಾರಿನಲ್ಲಿ ಬಂದು ಹೋಟೆಲ್​ ಮುಂದೆ ಶೋಗೆ ಇಟ್ಟಿದ್ದ ಗಿಡದ ಪಾಟ್ ಅನ್ನು ಕದ್ದು ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್ ಮಾಲೀಕ ಈ ದೃಶ್ಯಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ವಿಡಿಯೋಗಳು ವೈರಲ್ ಆಗುತ್ತಿವೆ.

ಬೆಂಗಳೂರು, ಜುಲೈ.01: ಬೆಂಗಳೂರಲ್ಲೊಂದು ವಿಚಿತ್ರ ಫ್ಯಾಮಿಲಿ ಕಂಡುಬಂದಿದೆ. ಈ ಕುಟುಂಬದ ಕೃತ್ಯ ಕಂಡ ಹೋಟೆಲ್ ಮಂದಿ ಶಾಕ್ ಆಗಿದ್ದಾರೆ. ಅಸಲಿಗೆ ಈ ಕುಟುಂಬ ಮಾಡಿದ್ದೇನು ಅಂದರೆ, ಗಂಡ-ಹೆಂಡತಿ ತಡರಾತ್ರಿ ಹೋಟೆಲ್ ಬಳಿ ಬಂದು ಯಾರು ಇಲ್ಲದ ವೇಳೆ ಗಿಡದ ಪಾಟ್ ಗಳನ್ನು ಕದ್ದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋ ದೃಶ್ಯಗಳು ವೈರಲ್ ಆಗಿವೆ.

ಕಾರಿನಲ್ಲಿ ಬಂದ ಮಹಿಳೆ ಮತ್ತು ಪುರಷ ಇಬ್ಬರು ಬಂದು ಪಾಟ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್ ಒಂದರ ಮುಂದೆ ಶೋಗಾಗಿ ಇರಿಸಿದ್ದ ಪಾಟ್ ಕಳ್ಳತನ ಮಾಡಿದ್ದಾರೆ. ಹೋಟೆಲ್ ಮಾಲೀಕ ಸಿಸಿಟಿವಿ ದೃಶ್ಯಗಳನ್ನು ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಸಿಸಿಟಿವಿ ದೃಶ್ಯ ಆಧರಿಸಿ ಘಟನೆ ಎಲ್ಲಿ ಆಗಿರೋದು, ಯಾವಾಗ ಆಗಿರೋದು ಎಂದು ಪೊಲೀಸರು ಮಾಹಿತಿ ಕೇಳಿದ್ದಾರೆ. ಆದರೆ ಘಟನೆ ಬಗ್ಗೆ ಈ ವರೆಗೂ ಯಾವುದೇ ದೂರು ದಾಖಲಾಗಿಲ್ಲ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More