ಹುಬ್ಬಳ್ಳಿ ರಸ್ತೆಗಳಲ್ಲಿ ಕೊರೊನಾ ಸೋಂಕಿತನ ಓಡಾಟ, ಮುಂದೇನಾಯ್ತು?

| Updated By: ಸಾಧು ಶ್ರೀನಾಥ್​

Updated on: Jul 12, 2020 | 3:09 PM

[lazy-load-videos-and-sticky-control id=”n3bNhseG8X0″] ಹುಬ್ಬಳ್ಳಿ: ನಗರದಲ್ಲೂ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ನಗರದ ಚೆನ್ನಮ್ಮ ವೃತ್ತದಲ್ಲಿ ಸೋಂಕಿತನೊಬ್ಬ ಓಡಾಡುತ್ತಿದ್ದದನ್ನು ಕಂಡು ಸ್ಥಳೀಯರು ಆತಂಕಗೊಂಡ ಘಟನೆ ನಡೆದಿದೆ. ಹೌದು, ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ನಗರದ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದ. ನಿನ್ನೆ ರಾತ್ರಿ ಆತನಿಗೆ ಪಾಸಿಟಿವ್ ಅಂತಾ ಮೊಬೈಲ್​ಗೆ ಮೇಸೆಜ್ ಬಂದಿದೆ. ಆದರೆ, ಬಹಳಷ್ಟು ಗಂಟೆ ಕಳೆದರೂ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆರೋಗ್ಯಾಧಿಕಾರಿಗಳು ಬರಲೇ ಇಲ್ಲ. ಇದರಿಂದ ಕೊಂಚ ಬೆದರಿದ […]

ಹುಬ್ಬಳ್ಳಿ ರಸ್ತೆಗಳಲ್ಲಿ ಕೊರೊನಾ ಸೋಂಕಿತನ ಓಡಾಟ, ಮುಂದೇನಾಯ್ತು?
Follow us on

[lazy-load-videos-and-sticky-control id=”n3bNhseG8X0″]

ಹುಬ್ಬಳ್ಳಿ: ನಗರದಲ್ಲೂ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ನಗರದ ಚೆನ್ನಮ್ಮ ವೃತ್ತದಲ್ಲಿ ಸೋಂಕಿತನೊಬ್ಬ ಓಡಾಡುತ್ತಿದ್ದದನ್ನು ಕಂಡು ಸ್ಥಳೀಯರು ಆತಂಕಗೊಂಡ ಘಟನೆ ನಡೆದಿದೆ.

ಹೌದು, ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ನಗರದ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದ. ನಿನ್ನೆ ರಾತ್ರಿ ಆತನಿಗೆ ಪಾಸಿಟಿವ್ ಅಂತಾ ಮೊಬೈಲ್​ಗೆ ಮೇಸೆಜ್ ಬಂದಿದೆ. ಆದರೆ, ಬಹಳಷ್ಟು ಗಂಟೆ ಕಳೆದರೂ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆರೋಗ್ಯಾಧಿಕಾರಿಗಳು ಬರಲೇ ಇಲ್ಲ. ಇದರಿಂದ ಕೊಂಚ ಬೆದರಿದ ಸೋಂಕಿತ ಬೀದಿಗಿಳಿದು ನೆರವು ಕೇಳಲು ಪ್ರಾರಂಭಿಸಿದ.

ಈ ಸುದ್ದಿ ಟಿವಿ9 ನಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯಾಧಿಕಾರಿಗಳು ಕೊನೆಗೂ ಆತನನ್ನ ಕೊವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದರು.

Published On - 12:06 pm, Sun, 12 July 20