ಮೊದಲ ಹೆಂಡತಿಯ ಮಗಳಾಗಿರುವ ಕಾರಣ ಯೋಗೇಶ್ವರ್ ಮನೆಯಲ್ಲಿ ನನಗೆ ಸ್ಥಾನವಿಲ್ಲ, ಹೋದರೆ ಅಪ್ಪ ಹೊಡೆಯುತ್ತಾರೆ!: ನಿಶಾ ಯೋಗೇಶ್ವರ್
ತನ್ನ ಚಿಕ್ಕಮ್ಮ (ಮಲತಾಯಿ) ಯಾವತ್ತೂ ತನಗೆ ಅಮ್ಮನಾಗಲಿಲ್ಲ, ಅವರು ಬಿಡಿ; ಸಾರ್ವಜನಿಕ ಬದುಕಿನಲ್ಲಿರುವ ತನ್ನ ತಂದೆಯೇ ಆದರ್ಶ ಅಪ್ಪ ಆಗಲಿಲ್ಲ ಅನ್ನುತ್ತಾರೆ. ರಾಮಾಯಣದ ಸೀತೆ 14 ವರ್ಷಗಳ ಕಾಲ ವನವಾಸ ಅನುಭವಿಸಿದರೆ ತಾನು 24 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದೇನೆ, ತಂದೆಯ ಎರಡನೇ ಹೆಂಡತಿಯ ಮಗ ಯಾವತ್ತೂ ತನ್ನ ಪಾಲಿಗೆ ಭರತನಾಗಲಿಲ್ಲ ಎನ್ನುತ್ತಾರೆ ನಿಶಾ.
ರಾಮನಗರ: ನಮ್ಮ ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನೋದೇ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ. ಭಯಾನಕ ಮತ್ತು ವಿಚಿತ್ರವಾದ ಘಟನೆಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಿವೆ. ಬಿಜೆಪಿ ಧುರೀಣ ಸಿಪಿ ಯೋಗೇಶ್ವರ್ (CP Yogeshwar) ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ನಿನ್ನೆಯವರೆಗೆ ತನ್ನ ಯಾವುದೇ ಇಚ್ಛೆಗೆ ತಂದೆ ಅಡ್ಡ ಬರೋದಿಲ್ಲ, ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಅನ್ನುತ್ತಿದ್ದವರು ಇವತ್ತು ವಿಡಿಯೋವೊಂದನ್ನು ಬಿಡುಗಡೆ ಮಾಡಿ ಯೋಗೇಶ್ವರ್ ವಿರುದ್ಧ ಗುರುತರ ಆರೋಪಗಳನ್ನು (serious charges) ಮಾಡಿದ್ದಾರೆ. ತಾನು ಯೋಗೇಶ್ವರ್ ಅವರ ಮೊದಲ ಹೆಂಡತಿ ಮಗಳಾಗಿರುವುದರಿಂದ ಅವರ ಮನೆಯಲ್ಲಿ ಸ್ಥಾನವಿಲ್ಲ, ತನ್ನ ಚಿಕ್ಕಮ್ಮ (ಮಲತಾಯಿ) ಯಾವತ್ತೂ ತನಗೆ ಅಮ್ಮನಾಗಲಿಲ್ಲ, ಅವರು ಬಿಡಿ; ಸಾರ್ವಜನಿಕ ಬದುಕಿನಲ್ಲಿರುವ ತನ್ನ ತಂದೆಯೇ ಆದರ್ಶ ಅಪ್ಪ ಆಗಲಿಲ್ಲ ಅನ್ನುತ್ತಾರೆ. ರಾಮಾಯಣದ ಸೀತೆ 14 ವರ್ಷಗಳ ಕಾಲ ವನವಾಸ ಅನುಭವಿಸಿದರೆ ತಾನು 24 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದೇನೆ, ತಂದೆಯ ಎರಡನೇ ಹೆಂಡತಿಯ ಮಗ ಯಾವತ್ತೂ ತನ್ನ ಪಾಲಿಗೆ ಭರತನಾಗಲಿಲ್ಲ ಎನ್ನುತ್ತಾರೆ.
ಜನರ ಒತ್ತಾಯಕ್ಕೆ ಮಣಿದು ತಾನು ಅಪ್ಪನೊಂದಿಗೆ ರಾಜಿ ಮಾಡಿಕೊಡು ಅವರೊಂದಿಗಿರಲು ಹೋದರೆ, ರಪರಪಾಂತ ಹೊಡೆಯುತ್ತಾರೆ, ಆಚೆ ಹೋಗಿ ಭಿಕ್ಷೆಯಾದರರೂ ಬೇಡಿ ಬದುಕಿಕೋ ಮನೆಗೆ ಮಾತ್ರ ಬರಬೇಡ ಅನ್ನುತ್ತಾರೆ ಎಂದು ನಿಶಾ ಹೇಳುತ್ತಾರೆ. ಈ ವಿಡಿಯೋದಲ್ಲಿ ನಿಶಾ ಮಾಡುತ್ತಿರುವ ಅರೋಪಗಳು ನಿಜವೇ ಆಗಿದ್ದರೆ, ಯೋಗೇಶ್ವರ್ ರಾಜಕೀಯ ಬದುಕಿಗೆ ದೊಡ್ಡ ಅಪಾಯ ಎದುರಾಗೋದು ನಿಶ್ಚಿತ ಅಂತ ಅನಿಸದಿರದು. ನಿಶಾ ದುಃಖ, ಹತಾಷೆ ಮತ್ತು ಯಾತನೆಯಿಂದ ತಮ್ಮ ಮಾತುಗಳನ್ನು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ