ರಾಜ್ಯದ ಗೌರವ ಹಾಳು ಮಾಡಿದ್ದು ನಾವಲ್ಲ, ಪೆನ್ ಡ್ರೈವ್ ಹಂಚಿಕೆಗೆ ಕಾರಣೀಕರ್ತನಾದ ಸಿಡಿ ಶಿವು: ಹೆಚ್ ಡಿ ಕುಮಾರಸ್ವಾಮಿ

ರಾಜ್ಯದ ಗೌರವ ಹಾಳು ಮಾಡಿದ್ದು ನಾವಲ್ಲ, ಪೆನ್ ಡ್ರೈವ್ ಹಂಚಿಕೆಗೆ ಕಾರಣೀಕರ್ತನಾದ ಸಿಡಿ ಶಿವು: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 22, 2024 | 12:51 PM

ಡ್ರೈವರ್ ಕಾರ್ತೀಕ್ ಪೆನ್ ಡ್ರೈವ್ ತೆಗೆದುಕೊಂಡು ಮೊದಲು ಡಿಕೆ ಸುರೇಶ್ ಮನೆಗೆ ಹೋಗಿದ್ದಾನೆ. ಅಮೇಲೆ ಅವನು ಸಿಡಿ ಶಿವು (ಡಿಕೆ ಶಿವಕುಮಾರ್) ಮನೆಗೆ ಬಂದಿದ್ದಾನೆ. ಮುಂದೆ ಯಾವತ್ತಾದರೂ ಕೆಲಸಕ್ಕೆ ಬರುತ್ತದೆ ಅಂತ ಸಿಡಿ ಶಿವು ಡೌನ್ ಲೋಡ್ ಮಾಡ್ಕೊಂಡು ತನ್ನ ಬಳಿ ಇಟ್ಟುಕೊಂಡಿದ್ದಾನೆ, ಸಮಯ ಬಂದಾಗ ವಿತರಣೆ ಮಾಡಿ ಸಂತ್ರಸ್ತೆಯರ ಮಾನ ಹರಾಜು ಮಾಡಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದರು.

ಮೈಸೂರು: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗಹೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಕುಟುಂಬ ಯಾವತ್ತೂ ಅಧಿಕಾರಕ್ಕಾಗಿ ಆಸೆಪಟ್ಟಿಲ್ಲ, ತಮ್ಮ ತಂದೆ (HD Devegowda) ಮನಸ್ಸು ಮಾಡಿದ್ದರೆ ಸುಲಭವಾಗಿ 5 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ (Prime Minister) ಮುಂದುವರಿಯಬಹುದಿತ್ತು, ಅದರೆ ಅವರು ಸಿದ್ಧಾಂತಗಳಿಗೆ ಕಟ್ಟುಬಿದ್ದು ಆ ಉನ್ನತ ಹುದ್ದೆಯನ್ನು ತೊರೆದು ಆಚೆ ಬಂದರು ತಮ್ಮ ಕುಟುಂಬ ಎಲ್ಲ ಬಗೆಯ ಅಧಿಕಾರವನ್ನು ಅನುಭವಿಸಿದೆ, ತಮಗೆ ಪ್ರಾಮಾಣಿಕವಾಗಿ ಜನಸೇವೆ ಮಾಡುವುದು ಮುಖ್ಯವೇ ಹೊರತು ಅಧಿಕಾರವಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಹಾಗೆ ರಾಜ್ಯದ ಗೌರವವನ್ನು ನಾವು ಹಾಳು ಮಾಡಿಲ್ಲ, ಲಕ್ಷಾಂತರ ಪೆನ್ ಡ್ರೈವ್ ಗಳು ಹಂಚಿಕೆಯಾಗಿವೆ ಅಂತ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರಲ್ಲ? ಅದಕ್ಕೆ ಕಾರಣೀಕರ್ತರು ಯಾರು? ಡ್ರೈವರ್ ಕಾರ್ತೀಕ್ ಪೆನ್ ಡ್ರೈವ್ ತೆಗೆದುಕೊಂಡು ಮೊದಲು ಡಿಕೆ ಸುರೇಶ್ ಮನೆಗೆ ಹೋಗಿದ್ದಾನೆ. ಅಮೇಲೆ ಅವನು ಸಿಡಿ ಶಿವು (ಡಿಕೆ ಶಿವಕುಮಾರ್) ಮನೆಗೆ ಬಂದಿದ್ದಾನೆ. ಮುಂದೆ ಯಾವತ್ತಾದರೂ ಕೆಲಸಕ್ಕೆ ಬರುತ್ತದೆ ಅಂತ ಸಿಡಿ ಶಿವು ಡೌನ್ ಲೋಡ್ ಮಾಡ್ಕೊಂಡು ತನ್ನ ಬಳಿ ಇಟ್ಟುಕೊಂಡಿದ್ದಾನೆ, ಸಮಯ ಬಂದಾಗ ವಿತರಣೆ ಮಾಡಿ ಸಂತ್ರಸ್ತೆಯರ ಮಾನ ಹರಾಜು ಮಾಡಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿದ್ದರಾಮಯ್ಯ ನನ್ನ ತಾಯಿಯ ಕೈತುತ್ತು ತಿಂದು ಬೆಳೆದಿದ್ದು ಅಂತ ಹೇಳುವ ಅಗತ್ಯ ಕುಮಾರಸ್ವಾಮಿಗಿತ್ತೇ?