Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದು ಹೊಳೆನರಸೀಪುರಕ್ಕೆ ಬಂದ ರೇವಣ್ಣ ಬೆಂಬಲಿಗರ ಪ್ರೀತಿ ಕಂಡು ಭಾವುಕ!

ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದು ಹೊಳೆನರಸೀಪುರಕ್ಕೆ ಬಂದ ರೇವಣ್ಣ ಬೆಂಬಲಿಗರ ಪ್ರೀತಿ ಕಂಡು ಭಾವುಕ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 22, 2024 | 2:05 PM

ದೇವಾಲಯದ ಆವರಣದಲ್ಲೇ ಬೆಂಬಲಿಗರು ಮತ್ತು ಸ್ಥಳೀಯ ಕಾರ್ಯಕರ್ತರು ಅವರನ್ನು ಸುತ್ತುವರಿದು ಜೈಕಾರ ಕೂಗಿದರು. ಅವರ ಅಭಿಮಾನ ಪ್ರೀತಿ ಕಂಡು ಭಾವುಕರಾದ ರೇವಣ್ಣಗೆ ಬಾಯಿಂದ ಮಾತೇ ಹೊರಡಲಿಲ್ಲ. ನೀವು ನನ್ನೊಂದಿದ್ದೀರಿ ಅಂತ ನನಗೆ ಮತ್ತೊಮ್ಮೆ ಮನವರಿಕೆಯಯಾಗಿದೆ, ನಾನ್ಯಾವತ್ತೂ ನಿಮ್ಮಿಂದ ದೂರವಾಗಲ್ಲ ಎಂದು ಹೇಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಹಾಸನ: ಕಳೆದ ಒಂದು ತಿಂಗಳ ಅವಧಿಯಲ್ಲಿ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಪಡಬಾರದ ಸಂಕಟ ಪಟ್ಟಿದ್ದಾರೆ. ಮಹಿಳೆಯೊಬ್ಬರ ಅಪಹರಣ (woman abduction) ಮತ್ತು ಇನ್ನೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ (sexual assault)-ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊಳೆನರಸೀಪುರಕ್ಕೆ ವಾಪಸ್ಸು ಬಂದಿರುವ ರೇವಣ್ಣರ ಜನಪ್ರಿಯತೆ ಕೊಂಚವೂ ತಗಿಲ್ಲ. ಹೊಳೆನರಸೀಪುರದ ಜನ ಅವರಿಗೆ ಮೊದಲಿನ ಪ್ರೀತಿ ಆದರಗಳನ್ನೇ ತೋರುತ್ತಿದ್ದಾರೆ. ರೇವಣ್ಣ ಪರಮ ದೈವಭಕ್ತ ಅಂತ ಕನ್ನಡಿಗರಿಗೆಲ್ಲ ಗೊತ್ತು. ಅವರು ತಮ್ಮೂರಿಗೆ ಬಂದ ಕೂಡಲೇ ಮೊದಲು ಲಕ್ಷ್ಮಿ ನರಸಿಂಹ ದೇವಾಲಯಲಕ್ಕೆ ಹೋಗಿ ಪೂಜೆ ಸಲ್ಲಿಸಿದರು. ದೇವಾಲಯದ ಆವರಣದಲ್ಲೇ ಬೆಂಬಲಿಗರು ಮತ್ತು ಸ್ಥಳೀಯ ಕಾರ್ಯಕರ್ತರು ಅವರನ್ನು ಸುತ್ತುವರಿದು ಜೈಕಾರ ಕೂಗಿದರು. ಅವರ ಅಭಿಮಾನ ಪ್ರೀತಿ ಕಂಡು ಭಾವುಕರಾದ ರೇವಣ್ಣಗೆ ಬಾಯಿಂದ ಮಾತೇ ಹೊರಡಲಿಲ್ಲ. ನೀವು ನನ್ನೊಂದಿದ್ದೀರಿ ಅಂತ ನನಗೆ ಮತ್ತೊಮ್ಮೆ ಮನವರಿಕೆಯಯಾಗಿದೆ, ನಾನ್ಯಾವತ್ತೂ ನಿಮ್ಮಿಂದ ದೂರವಾಗಲ್ಲ ಎಂದು ಹೇಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ, ನಮ್ಮ ವ್ಯವಹಾರಗಳೂ ಬೇರೆ ಬೇರೆ: ಹೆಚ್ ಡಿ ಕುಮಾರಸ್ವಾಮಿ