ಸಿದ್ದರಾಮಯ್ಯ ನನ್ನ ತಾಯಿಯ ಕೈತುತ್ತು ತಿಂದು ಬೆಳೆದಿದ್ದು ಅಂತ ಹೇಳುವ ಅಗತ್ಯ ಕುಮಾರಸ್ವಾಮಿಗಿತ್ತೇ?

ಪ್ರಜ್ವಲ್ ವಿಡಿಯೋಗಳನ್ನು ಮಾಡಿದ್ದು ಬೇರೆ ವಿಚಾರ ಅದರೆ, ಅವುಗಳನ್ನು ಹಂಚುವ ಕೆಲಸ ಕಾಂಗ್ರೆಸ್ ಯಾಕೆ ಮಾಡಿತು? ಆ ಸಂತ್ರಸ್ತೆಯರ ಗತಿಯೇನು? ಅವರಿಗೆ ನ್ಯಾಯ ಸಿಗುತ್ತದೆ ಅಂತ ವಿಡಿಯೋಗಳನ್ನು ಹಂಚಿದ್ರಾ? ಪೆನ್ ಡ್ರೈವ್ ಗಳನ್ನು ಹಂಚುವ ಹಿಂದಿನ ಉದ್ದೇಶವೇನು? ನನ್ನ ನೋವಿರೋದು ಸಂತ್ರಸ್ತೆಯರ ವಿಷಯದಲ್ಲಿ ಅಂತ ಕುಮಾರಸ್ವಾಮಿ ಹೇಳುತ್ತಾರೆ.

ಸಿದ್ದರಾಮಯ್ಯ ನನ್ನ ತಾಯಿಯ ಕೈತುತ್ತು ತಿಂದು ಬೆಳೆದಿದ್ದು ಅಂತ ಹೇಳುವ ಅಗತ್ಯ ಕುಮಾರಸ್ವಾಮಿಗಿತ್ತೇ?
|

Updated on: May 20, 2024 | 5:45 PM

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna case) ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಈಗ ವಿಕ್ಟಿಮ್ ಕಾರ್ಡ್ (victim card) ಪ್ಲೇ ಮಾಡಲು ಶುರುಮಾಡಿದ್ದಾರೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನೂ (Siddaramaiah) ಇದರಲ್ಲಿ ಎಳೆತರುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿದ್ದಾಗ ನಮ್ಮ ತಾಯಿಯ ಕೈತುತ್ತು ತಿಂದು ಬೆಳೆದಿದ್ದಾರೆ, ಇವತ್ತು ಆ ತಾಯಿ ಅನುಭವಿಸುತ್ತಿರುವ ಸಂಕಟ ಅವರಿಗೆ ಅರ್ಥವಾಗುತ್ತಿದೆಯಾ? ಯಾರೋ ಮಾಡಿದ ತಪ್ಪಿಗೆ ಒಂದು ಕುಟುಂಬವನ್ನೇ ಸರ್ವನಾಶ ಮಾಡೋದು ಯಾವ ನ್ಯಾಯವೆಂದು ಕುಮಾರಸ್ವಾಮಿ ಪ್ರಶ್ನಿಸುತ್ತಾರೆ. ಪ್ರಜ್ವಲ್ ವಿಡಿಯೋಗಳನ್ನು ಮಾಡಿದ್ದು ಬೇರೆ ವಿಚಾರ ಅದರೆ, ಅವುಗಳನ್ನು ಹಂಚುವ ಕೆಲಸ ಕಾಂಗ್ರೆಸ್ ಯಾಕೆ ಮಾಡಿತು? ಆ ಸಂತ್ರಸ್ತೆಯರ ಗತಿಯೇನು? ಅವರಿಗೆ ನ್ಯಾಯ ಸಿಗುತ್ತದೆ ಅಂತ ವಿಡಿಯೋಗಳನ್ನು ಹಂಚಿದ್ರಾ? ಪೆನ್ ಡ್ರೈವ್ ಗಳನ್ನು ಹಂಚುವ ಹಿಂದಿನ ಉದ್ದೇಶವೇನು? ನನ್ನ ನೋವಿರೋದು ಸಂತ್ರಸ್ತೆಯರ ವಿಷಯದಲ್ಲಿ ಅಂತ ಕುಮಾರಸ್ವಾಮಿ ಹೇಳುತ್ತಾರೆ.

ನಿಮಗೆ ನೆನಪಿರಬಹುದು, ಪೆನ್ ಡ್ರೈವ್ ಗಳು ಸಾರ್ವಜನಿಕಗೊಂಡಾಗ ಕುಮಾರಸ್ವಾಮಿಯವರು ಹೆಚ್ ಡಿ ರೇವಣ್ಣ ಮತ್ತು ತಮ್ಮ ಕುಟುಂಬದ ನಡುವೆ ಸಂಬಂಧವೇ ಇಲ್ಲ, ಅವರ ವ್ಯವಹಾರಗಳು ಬೇರೆ, ತಮ್ಮ ವ್ಯವಹಾರಗಳು ಬೇರೆ ಎಂದಿದ್ದರು. ಆದರೆ ದಿನಾಲು ಪ್ರಕರಣದ ಬಗ್ಗೆ ಮಾತಾಡುತ್ತಿದ್ದಾರೆ ಇವತ್ತು ಮೊದಲಬಾರಿ ರಾಜಕೀಯದಿಂದ ಗಾವುದ ದೂರವಿರುವ ಮತ್ತು ಅಪರೂಪಕ್ಕೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ತಮ್ಮ ತಾಯಿಯನ್ನೂ ಮಾತಿನಲ್ಲಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಳ್ಳುವ ಬದಲು ಎಸ್ಐಟಿ ಮುಂದೆ ಹಾಜರಾಗೋದು ಸೂಕ್ತ: ನಿಖಿಲ್ ಕುಮಾರಸ್ವಾಮಿ

Follow us