Modi in Puri: ಪುರಿಯಲ್ಲಿ ಪ್ರಧಾನಿ ಬೃಹತ್ ರೋಡ್ ಶೋ; ಕಿಕ್ಕಿರಿದ ಜನರಿಂದ ಮೋದಿಗೆ ಜೈಕಾರ

Modi in Puri: ಪುರಿಯಲ್ಲಿ ಪ್ರಧಾನಿ ಬೃಹತ್ ರೋಡ್ ಶೋ; ಕಿಕ್ಕಿರಿದ ಜನರಿಂದ ಮೋದಿಗೆ ಜೈಕಾರ

ಸುಷ್ಮಾ ಚಕ್ರೆ
|

Updated on: May 20, 2024 | 4:35 PM

ಲೋಕಸಭೆ ಚುನಾವಣೆ 2024: ಒಡಿಶಾ ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಒಡಿಶಾದ ಪುರಿಯಲ್ಲಿ ರೋಡ್‌ ಶೋ ನಡೆಸಿದರು. ಅವರು ಮಾರಿಚ್‌ಕೋಟೆ ಚೌಕದಿಂದ ಪುರಿಯ ಗ್ರ್ಯಾಂಡ್ ರಸ್ತೆಯಲ್ಲಿರುವ ವೈದ್ಯಕೀಯ ಚೌಕದವರೆಗೆ ರೋಡ್‌ಶೋ ನಡೆಸಿದರು. ಈ ವೇಳೆ ಬ್ಯಾರಿಕೇಡ್ ಹಾಕಲಾದ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ಸಾಲಿನಲ್ಲಿ ನಿಂತು, ಕಮಲದ ಚಿಹ್ನೆಯನ್ನು ಹಿಡಿದು ಪ್ರಧಾನಿಯತ್ತ ಕೈ ಬೀಸಿದರು.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಒಡಿಶಾದಲ್ಲಿ (Odisha) ಬೃಹತ್ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಪುರಿಯ (Puri Road Show) ಮಾರ್ಚಿಕೋಟೆ ಚೌಕ್‌ನಿಂದ ಪುರಿಯ ವೈದ್ಯಕೀಯ ಚೌಕದವರೆಗೆ ಮೋದಿ 2 ಕಿಲೋ ಮೀಟರ್ ಬೃಹತ್ ರೋಡ್‌ಶೋ ನಡೆಸಿದ್ದಾರೆ. ಗ್ರ್ಯಾಂಡ್ ರೋಡ್‌ ಶೋದಲ್ಲಿ ಬ್ಯಾರಿಕೇಡ್ ಮಾಡಲಾದ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು, ಕಮಲದ ಚಿಹ್ನೆಯನ್ನು ಹಿಡಿದು ಪ್ರಧಾನಿ ನರೇಂದ್ರ ಮೋದಿಯವರತ್ತ ಕೈ ಬೀಸಿದರು. ಜೈ ಶ್ರೀರಾಮ್, ಜೈ ಮೋದಿ ಎಂದು ಜನರು ಘೋಷಣೆ ಕೂಗಿದರು. ಈ ವೇಳೆ ಬಿಜೆಪಿಯ ಪುರಿ ಲೋಕಸಭಾ ಅಭ್ಯರ್ಥಿ ಸಂಬಿತ್ ಪಾತ್ರ ಮತ್ತು ಒಡಿಶಾ ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಕೂಡ ಜೊತೆಗಿದ್ದರು.

ರೋಡ್ ಶೋ ಬಳಿಕ ಪುರಿ ಜಗನ್ನಾಥ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಮೋದಿ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಹಾಪ್ರಭು ಜಗನ್ನಾಥನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಮತ್ತು ಪ್ರಗತಿಯ ಹೊಸ ಎತ್ತರಕ್ಕೆ ನಮ್ಮನ್ನು ಮಾರ್ಗದರ್ಶಿಸಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕಳೆದ 10 ದಿನಗಳಲ್ಲಿ ಒಡಿಶಾಗೆ ಇದು ಪಿಎಂ ಮೋದಿಯವರ ಎರಡನೇ ಭೇಟಿಯಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ