ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ತಪ್ಪಿಸಿಕೊಂಡ ಇಮ್ರಾನ್ ತಾಹಿರ್
ಇಮ್ರಾನ್ ತಾಹಿರ್ 4 ಓವರ್ಗಳಲ್ಲಿ ಕೇವಲ 27 ರನ್ ನೀಡಿ 4 ವಿಕೆಟ್ ಕಬಳಿ ಮಿಂಚಿದರು. ಇನ್ನು ಈ ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ನೀಡಿದ 163 ರನ್ಗಳ ಗುರಿಯನ್ನು ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು 17.2 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ನ 17ನೇ ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡದ ನಾಯಕ ನಿಕೋಲಸ್ ಪೂರನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಟ್ರಿನ್ಬಾಗೊ ನೈಟ್ ರೈಡರ್ಸ್ ಪರ ಅಲೆಕ್ಸ್ ಹೇಲ್ಸ್ 74 ರನ್ ಬಾರಿಸಿದರೆ, ಕಾಲಿನ್ ಮನ್ರೊ 52 ರನ್ ಸಿಡಿಸಿದರು. ಅತ್ತ ಆರಂಭಿಕರಿಬ್ಬರ ಆರ್ಭಟದ ಹೊರತಾಗಿಯೂ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಅದ್ಭುತ ಪ್ರದರ್ಶನ ನೀಡಿದರು.
10ನೇ ಓವರ್ನ 3ನೇ ಎಸೆತದಲ್ಲಿ ಕಾಲಿನ್ ಮನ್ರೋ ವಿಕೆಟ್ ಕಬಳಿಸಿದ ಇಮ್ರಾನ್ ತಾಹಿರ್, ಮರು ಎಸೆತದಲ್ಲಿ ನಿಕೋಲಸ್ ಪೂರನ್ (0) ಅವರನ್ನು ಔಟ್ ಮಾಡಿದರು. ಆದರಂತೆ 5ನೇ ಎಸೆತದಲ್ಲಿ ಹ್ಯಾಟ್ರಿಕ್ ಅವಕಾಶ ಪಡೆದರೂ ವಿಕೆಟ್ ಉರುಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ಓವರ್ನ ಕೊನೆಯ ಎಸೆತದಲ್ಲಿ ಕೀಸ್ ಕಾರ್ಟಿ (0) ಬೌಲ್ಡ್ ಮಾಡಿದರು.
ಆ ಬಳಿಕ 15ನೇ ಓವರ್ನಲ್ಲಿ ಮರಳಿದ ಇಮ್ರಾನ್ ತಾಹಿರ್ ಮೊದಲ ಎಸೆತದಲ್ಲೇ ಅಲೆಕ್ಸ್ ಹೇಲ್ಸ್ ವಿಕೆಟ್ ಪಡೆದರು. ಅತ್ತ ತನ್ನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದು, ಹೊಸ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ್ದರಿಂದ ಮತ್ತೊಮ್ಮೆ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಅವಕಾಶ ಇಮ್ರಾನ್ ತಾಹಿರ್ಗೆ ಒದಗಿತು. ಆದರೆ ಈ ಬಾರಿ ಕೂಡ ಅವರಿಗೆ ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ಇದಾಗ್ಯೂ ಇಮ್ರಾನ್ ತಾಹಿರ್ 4 ಓವರ್ಗಳಲ್ಲಿ ಕೇವಲ 27 ರನ್ ನೀಡಿ 4 ವಿಕೆಟ್ ಕಬಳಿ ಮಿಂಚಿದರು. ಇನ್ನು ಈ ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ನೀಡಿದ 163 ರನ್ಗಳ ಗುರಿಯನ್ನು ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು 17.2 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

