AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBL: ‘ನೀವು ಗೆಲ್ಬೇಕಂದ್ರೆ ಬಾಬರ್​ನ ತಂಡದಿಂದ ಹೊರಹಾಕಿ’; ಆಸೀಸ್ ದಿಗ್ಗಜನ ಹೇಳಿಕೆ

BBL: ‘ನೀವು ಗೆಲ್ಬೇಕಂದ್ರೆ ಬಾಬರ್​ನ ತಂಡದಿಂದ ಹೊರಹಾಕಿ’; ಆಸೀಸ್ ದಿಗ್ಗಜನ ಹೇಳಿಕೆ

ಪೃಥ್ವಿಶಂಕರ
|

Updated on: Jan 21, 2026 | 8:19 PM

Share

Babar Azam's BBL Struggles: ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಬಾಬರ್ ಆಝಂ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. 11 ಪಂದ್ಯಗಳಲ್ಲಿ ಕೇವಲ 202 ರನ್ ಗಳಿಸಿದ್ದು, ಏಳು ಬಾರಿ ಒಂದೇ ಅಂಕಿಯ ಸ್ಕೋರ್‌ಗೆ ಔಟಾಗಿದ್ದಾರೆ. ಇದರಿಂದ ಕೆರಳಿದ ಆಸ್ಟ್ರೇಲಿಯಾದ ಮಾಜಿ ಆಟಗಾರ ಮಾರ್ಕ್ ವಾ, ಸಿಡ್ನಿ ಸಿಕ್ಸರ್ಸ್ ಪಂದ್ಯಗಳನ್ನು ಗೆಲ್ಲಬೇಕಾದರೆ ಬಾಬರ್‌ನನ್ನು ತಂಡದಿಂದ ಕೈಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬ್ಯಾಷ್ ಲೀಗ್‌ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರ ಪ್ರದರ್ಶನ ಪಂದ್ಯದಿಂದ ಪಂದ್ಯಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಈ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್‌ ಪರ ಆಡುತ್ತಿರುವ ಬಾಬರ್​ಗೆ ಆರಂಭಿಕನ ಜವಾಬ್ದಾರಿ ನೀಡಲಾಗಿದೆ. ಆದರೆ ಬಾಬರ್​ ಸ್ಥಿರ ಪ್ರದರ್ಶನ ನೀಡುವುದಿರಲಿ, ಸ್ಥಿರವಾಗಿ ರನ್ ಕಲೆಹಾಕಲು ಸಾಧ್ಯವಾಗುತ್ತಿಲ್ಲ. ಆಡಿರುವ 11 ಪಂದ್ಯಗಳಲ್ಲಿ ಏಳು ಬಾರಿ ಒಂದೇ ಅಂಕಿಯ ಸ್ಕೋರ್‌ಗೆ ಔಟಾಗಿದ್ದಾರೆ. ಹೀಗಾಗಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಬಾಬರ್ ಅವರ ಕಳಪೆ ಪ್ರದರ್ಶನದಿಂದ ಕೆರಳಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ, ‘ಸಿಡ್ನಿ ಸಿಕ್ಸರ್ಸ್ ಪಂದ್ಯಗಳನ್ನು ಗೆಲ್ಲಲು ಬಯಸಿದರೆ, ಬಾಬರ್ ಆಝಂ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಬೇಕಾಗುತ್ತದೆ ಎಂದಿದ್ದಾರೆ.

ಹೋಬಾರ್ಟ್ ಹರಿಕೇನ್ಸ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ನಡುವಿನ ಪಂದ್ಯದ ಕುರಿತು ಕಾಮೆಂಟ್ ಮಾಡುತ್ತಿದ್ದ ಮಾರ್ಕ್ ವಾ, ‘ಸಿಡ್ನಿ ಸಿಕ್ಸರ್ಸ್‌ ತಂಡವು ನಿರ್ಣಾಯಕ ಪಂದ್ಯವನ್ನು ಗೆಲ್ಲಲು ಬಯಸಿದರೆ, ಬಾಬರ್ ಆಝಂ ಅವರನ್ನು ಆಡುವ ಹನ್ನೊಂದರಿಂದ ಕೈಬಿಡಬೇಕಾಗುತ್ತದೆ. ಬಾಬರ್ ಆಝಂ ವಿಶ್ವ ದರ್ಜೆಯ ಆಟಗಾರ, ಆದರೆ ಅವರ ಫಾರ್ಮ್​ ಪ್ರಸ್ತುತ ಕಳಪೆಯಾಗಿದೆ. ಹೀಗಾಗಿ ಅವರ ಸ್ಥಾನದಲ್ಲಿ ಇನ್ನೊಬ್ಬ ಆರಂಭಿಕ ಆಟಗಾರನನ್ನು ಪ್ರಯತ್ನಿಸಬೇಕಾಗಿದೆ ಎಂದಿದ್ದಾರೆ.

ಮಾರ್ಕ್​ ವಾ ಅವರ ಹೇಳಿಕೆಯಂತೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಬಾಬರ್ ಆಡಿರುವ 11 ಇನ್ನಿಂಗ್ಸ್‌ಗಳಲ್ಲಿ ಕೇವಲ 202 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 103.06 ಆಗಿದೆ. ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿಯೂ ಬಾಬರ್ ಎರಡನೇ ಎಸೆತದಲ್ಲಿ ಖಾತೆ ತೆರೆಯದೆಯೇ ಔಟಾದರು. ಪರಿಣಾಮವಾಗಿ, ಸಿಡ್ನಿ ತಂಡ ಕೇವಲ 99 ರನ್‌ಗಳಿಗೆ ಕುಸಿದು ಪರ್ತ್ ವಿರುದ್ಧ 48 ರನ್‌ಗಳಿಂದ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ