ಪ್ರೇಮಿಯೊಂದಿಗೆ ಪರಾರಿಯಾಗಲು ಯತ್ನಿಸಿದ ಪೊಲೀಸ್; ಹೆಂಡತಿಗಾಗಿ ಯೋಧನಿಂದ ರೈಲು ನಿಲ್ದಾಣದಲ್ಲಿ ಹೈಡ್ರಾಮಾ
ಸಿಆರ್‌ಪಿಎಫ್ ಯೋಧನಾಗಿದ್ದ ಗಂಡ, ಬಿಹಾರ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಂಡತಿ ಮತ್ತು ಆಕೆಯ ಪ್ರೇಮಿಯ ನಡುವೆ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಹೈಡ್ರಾಮಾ ನಡೆದಿದೆ. ತನ್ನ ಹೆಂಡತಿ ಆಕೆಯ ಲವರ್ ಜೊತೆ ಓಡಿಹೋಗಲು ಯತ್ನಿಸಿದ್ದಾಳೆಂದು ಸಿಆರ್‌ಪಿಎಫ್ ಯೋಧ ಗಲಾಟೆ ಮಾಡಿದ್ದು, ಹೊಡೆದಾಟವೂ ನಡೆದಿದೆ.
ಪಾಟ್ನಾ: ಕಳೆದ ಒಂದು ತಿಂಗಳಿನಿಂದ ತನ್ನ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದ ಸಿಆರ್‌ಪಿಎಫ್ ಯೋಧನಿಗೆ ಪಾಟ್ನಾದ ರೈಲು ನಿಲ್ದಾಣದಲ್ಲಿ ಆಕೆ ಮತ್ತೊಬ್ಬ ವ್ಯಕ್ತಿಯ ಜತೆಯಲ್ಲಿ ಇರುವುದು ಗೊತ್ತಾಗಿದೆ. ಆಕೆಯನ್ನು ಹುಡುಕಿಕೊಂಡು ಅಲ್ಲಿಗೆ ಬಂದ ಗಂಡ ತನ್ನ ಹೆಂಡತಿಯನ್ನು ಓಡಿಸಿಕೊಂಡು ಹೋಗುತ್ತಿದ್ದಾನೆಂದು ಆಕೆಯೊಂದಿಗಿದ್ದ ವ್ಯಕ್ತಿಯ ಜೊತೆ ರೈಲ್ವೆ ಪ್ಲಾಟ್ಫಾರ್ಮ್ನಲ್ಲೇ ಜಗಳವಾಡಿದ್ದಾನೆ. ಆತನ ಹೆಂಡತಿಯೂ ಬಿಹಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ. ಪೊಲೀಸ್ ಅಧಿಕಾರಿಯೇ ಹೀಗೆ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿ, ಈ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos