ಬೆಂಗಳೂರಿನ ಮದರಸಾದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ: ಕಚೇರಿಗೆ ಕರೆಸಿ ಮನಬಂದಂತೆ ಹಲ್ಲೆ
ನೋಡಿ, ಇಲ್ನೋಡಿ, ಬಾಲಕಿಯ ಬೆನ್ನು, ಕಪಾಳಕ್ಕೆ ಹೊಡೀತಿದ್ದಾನೆ. ತಲೆ ಜುಟ್ಟು ಹಿಡಿದು ಎಳೆಯುತ್ತಿದ್ದಾನೆ. ಮೇಲೇಳಲು ಯತ್ನಿಸ್ತಿರೋ ಬಾಲಕಿಯನ್ನು ಕಾಲಿನಿಂದ ಒದೀತಿದ್ದಾನೆ. ಈ ಎಲ್ಲ ದೃಶ್ಯಗಳು ಬೆಂಗಳೂರಿನ ಮದರಸಾವೊಂದರಲ್ಲಿ ಬಾಲಕಿಯರ ಮೆಲೆ ಪಾಪಿಯೊಬ್ಬ ಕ್ರೌರ್ಯ ಮೆರೆಯುತ್ತಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಸದ್ಯ ಈ ಸಿಟಿಟಿವಿ ದೃಶ್ಯ ವೈರಲ್ ಆಗುತ್ತಿದೆ.
ಬೆಂಗಳೂರು, ಫೆಬ್ರವರಿ 20: ಬೆಂಗಳೂರಿನ ಥಣಿಸಂದ್ರದಲ್ಲಿರುವ ಮದರಸಾದಲ್ಲಿ ಮೊಹಮ್ಮದ್ ಹಸನ್ ಎಂಬಾತ ಬಾಲಕಿಯರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಈ ಮದರಸ 2021ರಿಂದ ನಡೆಯುತ್ತಿದೆ. ಇಲ್ಲಿ 200 ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಮೊಹಮ್ಮದ್ ಹಸನ್ ಈ ಮದರಸ ನಡೆಸ್ತಿದ್ದು, ಈತನ ಸಹೋದರಿ ನಿಶಾ ಪ್ರಾಂಶುಪಾಲೆ ಆಗಿದ್ದಾರೆ. ಬಾಲಕಿಯರು ತಪ್ಪು ಮಾಡಿದ್ದಾರೆಂದು ಆರೋಪಿಸಿ ಮೊಹಮ್ಮದ್ ಹಸನ್, ಕಚೇರಿಗೆ ಕರೆದು ನಾಲ್ಕೈದು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ. ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಾಲಕಿಯರ ಪೋಷಕರು ಗರಂ ಆಗಿದ್ದಾರೆ. ಘಟನೆ ದೃಶ್ಯ ಕಂಡು ಪೋಷಕರು ಮದರಸ ಮುಂದೆ ಗಲಾಟೆ ಮಾಡಿದ್ದಾರೆ. ಮದರಸ ಪ್ರಿನ್ಸಿಪಲ್ ಸಹೋದರನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿ ಮೊಹಮ್ಮದ್ ಹಸನ್ನನ್ನು ಬಂಧಿಸಿದ್ದಾರೆ.
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
