CT Ravi in Mangaluru: ಮಧ್ಯ ಪ್ರದೇಶದಲ್ಲಿ ಬಿಜೆಪಿ ಘೋಷಿಸುತ್ತಿರುವ ಉಚಿತ ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಸಿಟಿ ರವಿ ಗಲಿಬಿಲಿಗೊಂಡರು!
ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಯಾವ ಕೋನದಿಂದಲೂ ತಾಳೆಯಾಗಲಿಲ್ಲ.
ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಇಂದು ಕರಾವಳಿ ನಗರ ಮಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿದರು. ಅವರೊಂದಿಗೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಮತ್ತು ಸ್ಥಳೀಯ ನಾಯಕರ ಸಹ ಇದ್ದರು. ಹಾಜರಿದ್ದ ಪತ್ರಕರ್ತರ ಪೈಕಿ ಒಬ್ಬರು ರವಿ ಗಲಿಬಿಲಿಗೊಳ್ಳುವ ಪ್ರಶ್ನೆ ಕೇಳಿದರು. ಉಚಿತ ಯೋಜನೆಗಳನ್ನು ಜಾರಿಗೊಳಿಸಿದರೆ ಸರ್ಕಾರ ದಿವಾಳಿ ಏಳುತ್ತದೆ ಅಂತ ಹೇಳುವ ನೀವು ಮಧ್ಯ ಪ್ರದೇಶದಲ್ಲಿ (Madhya Pradesh) ಕಾಂಗ್ರೆಸ್ ಘೋಷಿಸಿದಂಥ ಸ್ಕೀಮ್ ಗಳನ್ನು ಜಾರಿಗೆ ತರುವ ಭರವಸೆ ನೀಡುತ್ತಿರುವಿರಲ್ಲ ಅಂತ ಪತ್ರಕರ್ತ ಕೇಳಿದಾಗ ತಬ್ಬಿಬ್ಬಾದ ಮಾಜಿ ಶಾಸಕರಿಗೆ ಹೇಗೆ ಪ್ರತಿಕ್ರಿಯಿಬೇಕು ಅಂತ ಗೊತ್ತಾಗಲಿಲ್ಲ. ಕಡೆಗೆ ಯುದ್ಧ ನೀತಿ ಬದುಕಿನ ಆಗಬಾರದು, ಜನರು ಸ್ವಾವಲಂಬಿಯಾಗಿ ಬದುಕಲು ನೆರವಾಗುವ ಯೋಜನೆಗಳನ್ನು ಜಾರಿಗೆ ತರಬೇಕು, ಆತ್ಮನಿರ್ಭರ್ ಮತ್ತು ಮುದ್ರಾ ಯೋಜನೆಗಳ ಮೂಲಕ ಜನ ಸ್ವಾವಲಂಬಿಗಳಾಗಲು ಆದ್ಯತೆ ನೀಡುತ್ತಿದ್ದೇವೆ ಅಂತ ಹೇಳಿದರು. ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಯಾವ ಕೋನದಿಂದಲೂ ತಾಳೆಯಾಗಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ