ESCOM does it again: ಕೊಪ್ಪಳ ಎಸ್ಕಾಂ ಕರಾಮತ್ತು, ಎರಡು ಬಲ್ಬ್ ಉರಿಸುವ ಒಂಟಿ ಅಜ್ಜಿಯ ಮನೆಗೆ ರೂ. 1,03,315 ವಿದ್ಯುತ್ ಬಿಲ್!

ESCOM does it again: ಕೊಪ್ಪಳ ಎಸ್ಕಾಂ ಕರಾಮತ್ತು, ಎರಡು ಬಲ್ಬ್ ಉರಿಸುವ ಒಂಟಿ ಅಜ್ಜಿಯ ಮನೆಗೆ ರೂ. 1,03,315 ವಿದ್ಯುತ್ ಬಿಲ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 22, 2023 | 12:11 PM

ಅಜ್ಜಿ ಎಷ್ಟು ಮುಗ್ಧೆಯೆಂದರೆ, ಬಿಲ್ ಹಾಗೆ ಬಂದಾಗ ಏನು ಮಾಡಬೇಕು ಅನ್ನೋದು ಸಹ ಅವರಿಗೆ ಗೊತ್ತಿಲ್ಲ

ಕೊಪ್ಪಳ: ಗೃಹಜ್ಯೋತಿ ಯೋಜನೆಯನ್ನು (Gruha Jyoti) ಸರ್ಕಾರ ಜಾರಿ ಮಾಡಿ ಅದರೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಎಲ್ಲರಿಗಿಂತ ಜಾಸ್ತಿ ತಲೆಬಿಸಿಯಾಗಿರೋದು ಎಸ್ಕಾಂಗಳ ಮೀಟರ್ ರೀಡರ್ (meter reader) ಗಳಿಗಿರಬಹುದು. ಚಿಕ್ಕ ಪುಟ್ಟ ಮನೆಗಳಲ್ಲಿ ವಾಸವಾಗಿರುವ ವಿದ್ಯುತ್ ಬಳಕೆದಾರರಿಗೆ ಅವರು ಲಕ್ಷಗಟ್ಟಲೆ ಬಿಲ್ ನೀಡೋದು ಸಾಮಾನ್ಯವಾಗಿಬಿಟ್ಟಿದೆ. ಕೊಪ್ಪಳ ನಗರದ (Koppal) ಭಾಗ್ಯನಗರದಲ್ಲಿ ವಾಸವಾಗಿರುವ ಈ ವಯೋವೃದ್ಧೆಯ ಕತೆ ಕೇಳಿ. ಅವರ ಮನೆಯಲ್ಲಿ ಉರಿಯೋದು ಎರಡು ಬಲ್ಬ್ ಮಾತ್ರ. ಪ್ರತಿ ತಿಂಗಳು ರೂ.70-80 ಬರುತ್ತಿದ್ದ ವಿದ್ಯುತ್ ಬಿಲ್ ಈ ತಿಂಗಳು ರೂ. 1,03,315 ಬಂದಿದೆ. ಅಜ್ಜಿ ಎಷ್ಟು ಮುಗ್ಧೆಯೆಂದರೆ, ಬಿಲ್ ಹಾಗೆ ಬಂದಾಗ ಏನು ಮಾಡಬೇಕು ಅನ್ನೋದು ಸಹ ಅವರಿಗೆ ಗೊತ್ತಿಲ್ಲ. ನೀವೇ ಏನಾದರೂ ಮಾಡಿ ಅಂತ ಮಾಧ್ಯಮ ಪ್ರತಿನಿಧಿಗಳಿಗೆ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ