Shivarajkumar: ಡಿಕೆ ಶಿವಕುಮಾರ್ ಭೇಟಿ ಹಿಂದಿನ ಕಾರಣ ತಿಳಿಸಿದ ಶಿವರಾಜ್ಕುಮಾರ್
ಈ ಬಾರಿ ಕಾಂಗ್ರೆಸ್ ಪರವಾಗಿ ಶಿವಣ್ಣ ಪ್ರಚಾರ ಮಾಡಿದ್ದರು. ಕಾಂಗ್ರೆಸ್ ಗೆದ್ದು ಅಧಿಕಾರದ ಗದ್ದುಗೆ ಏರಿದೆ. ಈಗ ಡಿಕೆಶಿ ಅವರನ್ನು ಶಿವಣ್ಣ ಭೇಟಿ ಆಗಿದ್ದಾರೆ.
ನಟ ಶಿವರಾಜ್ಕುಮಾರ್ (Shivarajkumar) ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗೆ ಭೇಟಿ ಆದರು. ಈ ವೇಳೆ ಉಭಯಕುಶಲೋಪರಿ ಮಾತನಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪರವಾಗಿ ಶಿವಣ್ಣ ಪ್ರಚಾರ ಮಾಡಿದ್ದರು. ಕಾಂಗ್ರೆಸ್ ಗೆದ್ದು ಅಧಿಕಾರದ ಗದ್ದುಗೆ ಏರಿದೆ. ಇತ್ತೀಚೆಗೆ ಅವರು ಸಿಎಂ ಸಿದ್ದಾರಾಮಯ್ಯ ಅವರನ್ನು ಭೇಟಿ ಆಗಿದ್ದರು. ಈಗ ಡಿಕೆಶಿ ಅವರನ್ನು ಭೇಟಿ ಆಗಿದ್ದಾರೆ. ಈ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ‘ಇದೊಂದು ಸಾಮಾನ್ಯ ಭೇಟಿ. ಈ ಮೊದಲೇ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ, ಕ್ಯಾಪ್ಟನ್ ಮಿಲ್ಲರ್’ ಶೂಟಿಂಗ್ನಲ್ಲಿ ಬ್ಯುಸಿ ಇದ್ದೆ. ಈ ಕಾರಣಕ್ಕೆ ಭೇಟಿ ಸಾಧ್ಯ ಆಗಿರಲಿಲ್ಲ. ಶಿವಕುಮಾರ್ (Shivakumar) ಜೊತೆ ನನಗೆ ಸಲುಗೆ ಜಾಸ್ತಿ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 22, 2023 11:16 AM
Latest Videos