ಏನ್ಸಾರ್ ಮೇಲಿಂದ ಶುಭಸೂಚನೆ ಸಿಕ್ಕಿತಾ? ಬಹಳ ಖುಷಿಯಾಗಿದ್ದೀರಿ ಅಂತ ಶಿವಕುಮಾರ್ ಕಾಲೆಳೆದ ಸಿಟಿ ರವಿ
ನಮ್ಮನ್ನೂ ಊಟಕ್ಕೆ ಕರೆಯಬಗುದಾಗಿತ್ತು ಒಬ್ಬ ಶಾಸಕ ಹೇಳಿದಾಗ, ನೀವೆಲ್ಲ ಬರುವ ಹಾಗಿದ್ದರೆ ನಿಮ್ಮನ್ನೂ ಕರೆಯಬಹುದಿತ್ತು ಎನ್ನುವ ಶಿವಕುಮಾರ್, ಜನರನ್ನು ಸಂತೋಷಪಡಿಸುವುದು ಮತ್ತು ಎಲ್ಲರೂ ಸಂತೋಷದಿಂದ ಇರುವಂತೆ ಮಾಡೋದೇ ನಿಜವಾದ ದೇವರ ಸೇವೆ ಎಂದು ಮೊದಲು ಸಂಸ್ಕೃತದಲ್ಲಿ ಹೇಳಿ ನಂತರ ಕನ್ನಡದ ಭಾವಾರ್ಥ ಹೇಳುತ್ತಾರೆ.
ಬೆಂಗಳೂರು, 14 ಮಾರ್ಚ್: ವಿಧಾನ ಪರಿಷತ್ ನಲ್ಲಿ ಇಂದು ಸಿಟಿ ರವಿ, ರವಿ ಕುಮಾರ್ ಮತ್ತು ಉಳಿದ ಬಿಜೆಪಿ ಶಾಸಕರು ಸಖತ್ತಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕಾಲೆಳೆದರು. ಪ್ರಶ್ನೆಯೊಂದಕ್ಕೆ ಶಿವಕುಮಾರ್ ನಗುತ್ತಾ ಉತ್ತರ ನೀಡಿದಾಗ ರವಿ ಎದ್ದುನಿಂತು, ಇವತ್ತು ತಾವು ಪ್ರಸನ್ನವದನರಾಗಿದ್ದೀರಿ, ಹಿಂದೆಂದೂ ಕಾಣದ ಲವಲವಿಕೆ ನಿಮ್ಮ ಮುಖದಲ್ಲಿ ಕಾಣುತ್ತಿದೆ, ನಿನ್ನೆ ಎಲ್ಲ ಶಾಸಕರಿಗೆ ಊಟ ಬೇರೆ ಹಾಕಿಸಿದ್ದೀರಿ, ಏನಾದರೂ ಶುಭ ಸಮಾಚಾರ ಸಿಕ್ಕಿದೆಯಾ ಹೇಗೆ? ನಮ್ಮ ಜೊತೆ ಹಂಚಿಕೊಳ್ಳಬಹುದಲ್ವಾ ಅಂತ ಹೇಳುತ್ತಾರೆ. ಶಿವಕುಮಾರ್ ನಗುತ್ತಾ ನಿಂತುಬಿಡುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ: ಡಿಕೆ ಶಿವಕುಮಾರ್ ಆಯೋಜಿಸಿದ ಔತಣಕೂಟದಲ್ಲಿ ಇಬ್ಬರು ಬಿಜೆಪಿ ಶಾಸಕರು
Published on: Mar 14, 2025 07:01 PM