ಗೋವಾನಲ್ಲಿ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ಕೆಪಿಸಿಸಿ ಸದಸ್ಯರು ಸರ್ಕಾರ ರಚಿಸುವ ದಾವೆ ಹೂಡಲು ಹೋಗಿದ್ದರು! ಸಿಟಿ ರವಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 11, 2022 | 7:48 PM

ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ನಮ್ಮ ಪಕ್ಷದ ಅಭ್ಯರ್ಥಿಗಳೊಂದಿಗೆ ಸರಕಾರ ರಚಿಸುವ ಅವಕಾಶವನ್ನು ಕೋರಲು ತಮ್ಮನ್ನು ಬೇಟಿಯಾಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಭೇಟಿಯ ಕಾರಣವನ್ನು ತಿಳಿಸಿದ್ದರು ಅಂತ ರವಿ ಛೇಡಿಸಿದರು.

ಕರ್ನಾಟಕ ಕಾಂಗ್ರೆಸ್ ಕೆಲ ನಾಯಕರು ಗೋವಾ ವಿಧಾನ ಸಭಾ (Goa Assembly) ಚುನಾವಣಾ ಫಲಿತಾಂಶಗಳು ಹೊರಬೀಳುವ ಮೊದಲೇ ಸರ್ಕಾರ ರಚಿಸಲು ವಿಶೇಷ ವಿಮಾನವೊಂದರಲ್ಲಿ (special aircraft) ಅಲ್ಲಿಗೆ ಹೋಗಿದ್ದರು ಎಂದು ಬೆಂಗಳೂರಿನಲ್ಲಿಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಹಿರಿಯ ನಾಯಕ ಸಿ ಟಿ ರವಿ (CT Ravi) ಗೇಲಿ ಮಾಡಿದರು. ಮುಂದುವರಿದು ಹೇಳಿದ ಅವರು, ಕಾಂಗ್ರೆಸ್ ನಾಯಕರ ನಿಯೋಗವು ಗೋವಾದ ರಾಜ್ಯಪಾಲರಿಗೆ ಪತ್ರವೊಂದನ್ನು ಬರೆದಿದ್ದು ಇನ್ನೂ ತಮಾಷೆಯ ಸಂಗತಿ ಎಂದರು. ರಾಜ್ಯಪಾಲರನ್ನು ಭೇಟಿಯಾಗಬೇಕಾದರೆ ಭೇಟಿಯ ಉದ್ದೇಶವನ್ನು ಮುಂಚಿತವಾಗಿ ತಿಳಿಸಬೇಕಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ನಮ್ಮ ಪಕ್ಷದ ಅಭ್ಯರ್ಥಿಗಳೊಂದಿಗೆ ಸರಕಾರ ರಚಿಸುವ ಅವಕಾಶವನ್ನು ಕೋರಲು ತಮ್ಮನ್ನು ಬೇಟಿಯಾಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಭೇಟಿಯ ಕಾರಣವನ್ನು ತಿಳಿಸಿದ್ದರು ಅಂತ ರವಿ ಛೇಡಿಸಿದರು.

ಮಾರ್ಚ್ 7ರಂದು ಬಿತ್ತರಗೊಂಡ ಎಕ್ಸಿಟ್ ಪೋಲ್ ಗಳ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚು ಕಡಿಮೆ ಸಮಾನ ಸ್ಥಾನಗಳನ್ನು ಪಡೆಯಲಿವೆ ಎನ್ನಲಾಗಿತ್ತು. ಆದರೆ, ಅಂತಿಮವಾಗಿ 40 ಸ್ಥಾನಗಳ ಗೋವಾ ವಿಧಾನ ಸಭೆಗೆ ಬಿಜೆಪಿ 20 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 12 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿತು. ಎಮ್ಜಿಪಿಯ ಬೆಂಬಲದೊಂದಿಗೆ ಬಿಜೆಪಿ ಪುನಃ ಸರ್ಕಾರ ರಚಿಸಲು ಅಣಿಯಾಗುತ್ತಿದೆ.

ಕೂಸು ಹುಟ್ಟುವ ಮೊದಲೇ ಕುಲಾವಿ ಅನ್ನುವ ಮಾತಿನ ಹಾಗೆ ಕಾಂಗ್ರೆಸ್ ಪಕ್ಷ ಪ್ರದರ್ಶಿಸಿದ ಧಾವಂತವನ್ನು ಬಿಜೆಪಿ ಅಪಹಾಸ್ಯ ಮಾಡುತ್ತಿದೆ. ಕರ್ನಾಟಕ ಕಾಂಗ್ರೆಸ್ ಪೈಕಿ ಯಾರ ಹೆಸರನ್ನೂ ಅವರು ಉಲ್ಲೇಖಿಸಲಿಲ್ಲವಾದರೂ ಅವರ ಟೀಕೆಯ ಗುರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಆಗಿದ್ದರು. ಬಂದ ದಾರಿಗೆ ಸುಂಕವಿಲ್ಲವೆನ್ನುವ ಹಾಗೆ ಅವರು ಹ್ಯಾಪುಮೋರೆ ಹಾಕಿಕೊಂಡು ವಾಪಸ್ಸಾದರು ಅಂತ ರವಿ ಹೇಳಿದರು.

ಇದನ್ನೂ ಓದಿ:   Ex ಬಗ್ಗೆ ಮಾತು ಬೇಡ, Y ಬಗ್ಗೆ ಕೇಳಿ; ರಶ್ಮಿಕಾ ಯೂಟ್ಯೂಬ್​ ಚಾನೆಲ್​ ಶುರು; ಒಂದೇ ವಿಡಿಯೋಗೆ ಮುಗಿಬಿದ್ದ ಫ್ಯಾನ್ಸ್​