Ex ಬಗ್ಗೆ ಮಾತು ಬೇಡ, Y ಬಗ್ಗೆ ಕೇಳಿ; ರಶ್ಮಿಕಾ ಯೂಟ್ಯೂಬ್​ ಚಾನೆಲ್​ ಶುರು; ಒಂದೇ ವಿಡಿಯೋಗೆ ಮುಗಿಬಿದ್ದ ಫ್ಯಾನ್ಸ್​

ರಶ್ಮಿಕಾ ಮಂದಣ್ಣ ಮೊದಲ ವಿಡಿಯೋದಲ್ಲಿ ತಮ್ಮ ಯೂಟ್ಯೂಬ್​ ಚಾನೆಲ್ ಉದ್ದೇಶ ಏನು ಎಂಬುದನ್ನು ತಿಳಿಸಿದ್ದಾರೆ. 56 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಅವರ ಚುಟುಕು ಸಂದರ್ಶನ ಇದೆ.

Ex ಬಗ್ಗೆ ಮಾತು ಬೇಡ, Y ಬಗ್ಗೆ ಕೇಳಿ; ರಶ್ಮಿಕಾ ಯೂಟ್ಯೂಬ್​ ಚಾನೆಲ್​ ಶುರು; ಒಂದೇ ವಿಡಿಯೋಗೆ ಮುಗಿಬಿದ್ದ ಫ್ಯಾನ್ಸ್​
ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on: Mar 11, 2022 | 2:12 PM

ಎಲ್ಲರಿಗೂ ಯೂಟ್ಯೂಬ್​ ಎಂಬುದು ಹೊಸ ವೇದಿಕೆ ಆಗಿದೆ. ಜನಸಾಮಾನ್ಯರು ಕೂಡ ತಮ್ಮದೇ ಯೂಟ್ಯೂಬ್​ ಚಾನೆಲ್​ (YouTube Channel) ಆರಂಭಿಸಿ, ಅದರಿಂದ ಹಣ ಗಳಿಸುತ್ತಾರೆ. ಸೆಲೆಬ್ರಿಟಿಗಳು ಸಹ ಈ ವಿಚಾರದಲ್ಲಿ ಹಿಂದಿ ಬಿದ್ದಿಲ್ಲ. ಅನೇಕ ನಟ-ನಟಿಯರು ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಅದರಿಂದಲೂ ಅವರು ಹಣ ಗಳಿಸುತ್ತಾರೆ. ಈಗ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಇದೇ ಹಾದಿಯಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಇಷ್ಟು ದಿನ ಕೇವಲ ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ಟ್ವಿಟರ್​ ಮುಂತಾದ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಯೂಟ್ಯೂಬ್​ (Rashmika Mandanna YouTube Channel) ಲೋಕಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿಗೆ ಕಾಲಿಡುತ್ತಿದ್ದಂತೆಯೇ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಒಂದೇ ದಿನಕ್ಕೆ 37 ಸಾವಿರಕ್ಕೂ ಅಧಿಕ ಮಂದಿ ಚಂದಾದಾರರು ಸಿಕ್ಕಿದ್ದಾರೆ. ‘ರಶ್ಮಿಕಾ ಮಂದಣ್ಣ’ ಎಂಬ ಈ ವೇರಿಫೈಯ್ಡ್​ ಯೂಟ್ಯೂಬ್​ ಚಾನೆಲ್​ನಲ್ಲಿ ಕೊಡಗಿನ ಕುವರಿ ಈವರೆಗೆ ಹಂಚಿಕೊಂಡಿರುವುದು ಒಂದು ಒಂದು ವಿಡಿಯೋ ಮಾತ್ರ. ಹಾಗಾದರೆ ಆ ವಿಡಿಯೋದಲ್ಲಿ ಏನಿದೆ? ಜನರಿಗೆ ಈ ವಿಡಿಯೋ ಇಷ್ಟ ಆಗಿದೆಯಾ? ಎಷ್ಟು ವೀವ್ಸ್​ ಆಗಿದೆ? ಆ ಕುರಿತು ಪೂರ್ತಿ ಮಾಹಿತಿ ಇಲ್ಲಿದೆ..

ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂಬುದು ಅಭಿಮಾನಿಗಳ ಆಸೆ. ಅದಕ್ಕಾಗಿಯೇ ರಶ್ಮಿಕಾ ಈ ಚಾನೆಲ್​ ಶುರು ಮಾಡಿದ್ದಾರೆ. ಈಗ ಹಂಚಿಕೊಂಡಿರುವ ಮೊದಲ ವಿಡಿಯೋದಲ್ಲಿ ತಮ್ಮ ಯೂಟ್ಯೂಬ್​ ಚಾನೆಲ್ ಉದ್ದೇಶ ಏನು ಎಂಬುದನ್ನು ಅವರು ತಿಳಿಸಿದ್ದಾರೆ. 56 ಸೆಕೆಂಡ್​ಗಳ ಈ ವಿಡಿಯೋದಲ್ಲಿ ರಶ್ಮಿಕಾ ಅವರ ಚುಟುಕು ಸಂದರ್ಶನ ಇದೆ. ಅದು ಫ್ಯಾನ್ಸ್​ ಗಮನ ಸೆಳೆದಿದೆ.

‘ಸಾಮಾನ್ಯವಾಗಿ ಜನರು Ex-​(ಮಾಜಿ)ಗಳ ಬಗ್ಗೆ ಮಾತಾಡುತ್ತಾರೆ. ಆದರೆ ನಾವು ಇವತ್ತು ನಿಮ್ಮ Y-(ಯಾಕೆ)ಗಳ ಬಗ್ಗೆ ಮಾತಾಡುತ್ತೇವೆ’ ಎಂದು ಸಂದರ್ಶಕಿ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ರಶ್ಮಿಕಾ, ‘ಅದು ನನಗೆ ಇಷ್ಟ’ ಎಂದು ಹೇಳಿದ್ದಾರೆ. ನಂತರ ಸರಣಿ ಪ್ರಶ್ನೆಗಳನ್ನು ಕೇಳಲಾಗಿದ್ದು, ಅದೆಲ್ಲದಕ್ಕೂ ರಶ್ಮಿಕಾ ಚುಟುಕಾಗಿಯೇ ಉತ್ತರ ನೀಡಿದ್ದಾರೆ.

ಪ್ರವಾಸ ಮಾಡುವುದು ನಿಮಗೆ ಯಾಕೆ ಇಷ್ಟ? ಯಾಕೆಂದರೆ ನನಗೆ ನೆನಪುಗಳನ್ನು ಕೂಡಿಡುವುದು ಎಂದರೆ ಇಷ್ಟ.

ನಿಮಗೆ ಆ್ಯಕ್ಟಿಂಗ್​ ಅಂದರೆ ಯಾಕೆ ಇಷ್ಟ? ನನ್ನನ್ನು ನಾನು ಕಂಡುಕೊಳ್ಳಲು ಇದು ನನಗೆ ಸಹಾಯ ಮಾಡುತ್ತದೆ.

ಡ್ಯಾನ್ಸ್​ ಎಂದರೆ ನಿಮಗೆ ಯಾಕೆ ಇಷ್ಟ? ಯಾಕೆಂದರೆ ಶಾಲಾ ದಿನಗಳಿಂದಲೂ ನಾನು ಡ್ಯಾನ್ಸ್​ ಮಾಡುತ್ತಾ ಬಂದಿದ್ದೇನೆ.

ಹೀಗೆ ಸಾಗುತ್ತದೆ ಪ್ರಶ್ನೋತ್ತರಗಳ ಸವಾರಿ. ತಮಗೆ ಸಿಹಿ ತಿಂಡಿ ಇಷ್ಟ. ಅದಕ್ಕಾಗಿಯೇ ತಾವು ಜಿಮ್​ನಲ್ಲಿ ವರ್ಕೌಟ್​ ಮಾಡುವುದಾಗಿ ರಶ್ಮಿಕಾ ಹೇಳಿದ್ದಾರೆ. ಈ ರೀತಿಯ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಲು ತಮ್ಮ ಯೂಟ್ಯೂಬ್​ ಚಾನೆಲ್​ ಫಾಲೋ ಮಾಡಿ ಎಂದು ರಶ್ಮಿಕಾ ಹೇಳಿದ್ದಾರೆ. ಒಂದು ದಿನ ಕಳೆಯುವುದರೊಳಗೆ ಒಂದೂವರೆ ಲಕ್ಷಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆ ಕಂಡಿದೆ.

ಈಗಾಗಲೇ ರಶ್ಮಿಕಾ ಮಂದಣ್ಣ ಅವರು ದೇಶಾದ್ಯಂತ ಫೇಮಸ್​ ಆಗಿದ್ದಾರೆ. ಸ್ಟಾರ್​ ನಟರ ಜೊತೆ ಅಭಿನಯಿಸುವ ಮೂಲಕ ಜನಮನ ಗೆದ್ದಿರುವ ಅವರಿಗೆ ಭರ್ಜರಿ ಡಿಮ್ಯಾಂಡ್​ ಇದೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಜೊತೆಗೆ, ಜಾಹೀರಾತು ಕ್ಷೇತ್ರದಲ್ಲೂ ರಶ್ಮಿಕಾ ಮಿಂಚುತ್ತಿದ್ದಾರೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಆ ಎಲ್ಲ ಮೂಲಗಳಿಂದಲೂ ಅವರಿಗೆ ಆದಾಯ ಬರುತ್ತಿದೆ. ಈಗ ಯೂಟ್ಯೂಬ್​ ಕೂಡ ಪ್ರಾರಂಭಿಸಿದ್ದು, ಅದರಿಂದಲೂ ಅವರು ಹಣ ಗಳಿಸಲಿದ್ದಾರೆ.

ಇದನ್ನೂ ಓದಿ:

​ರಶ್ಮಿಕಾ ಮಂದಣ್ಣ ಕೊಟ್ಟ ಚಮಕ್​ ಕಂಡು ಹೌಹಾರಿದ ವರುಣ್​ ಧವನ್​; ವೈರಲ್​ ಆಗಿದೆ ಈ ವಿಡಿಯೋ

ಶೂಟಿಂಗ್​ ವೇಳೆ ತೆರೆ ಹಿಂದೆ ರಶ್ಮಿಕಾ ಮಂದಣ್ಣ ಮಾಡುವ ತರ್ಲೆ-ತಮಾಷೆಗೆ ಈ ವಿಡಿಯೋ ಸಾಕ್ಷಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ