ಬೆಂಗಳೂರು: ಬಿಜೆಪಿ ನಾಯಕ ಸಿಟಿ ರವಿ (CT Ravi) ಭಟ್ಕಳದಲ್ಲಿ ಮಾಂಸಾಹಾರ ಸೇವಿಸಿ ದೇವಸ್ಥಾನದೊಳಗೆ ಪ್ರವೇಶಿಸಿದ ವಿಡಿಯೋ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರದಂದು ಹರಿದಾಡಿದರೂ ಶಾಸಕರು ಮಾತ್ರ ತಾವು ಗರ್ಭಗುಡಿ (sanctorum) ಪ್ರವೇಶಿಸಿಯೇ ಇಲ್ಲ ಅಂತ ಸಾಧಿಸುತ್ತಿದ್ದಾರೆ. ನಿನ್ನೆ ಮಂಡ್ಯದಲ್ಲಿ ದೇವಸ್ಥಾನಕ್ಕೆ ಹೋಗೇ ಇಲ್ಲ ಅಂತ ಹೇಳಿದ್ದ ಅವರು ನಂತರ ಹೋಗಿದ್ದೆ ಅದರೆ, ಹೊರಗಿನಿಂದಲೇ ನಮಸ್ಕಾರ ಮಾಡಿ ಬಂದೆ ಎಂದಿದ್ದರು. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರ ಧ್ವನಿ ಬಹಳ ಸಾಫ್ಟ್ ಆಗಿತ್ತು. ಎರಡೂ ದೇವಸ್ಥಾನಗಳ ನಡುವಿನ ಪಾಸೇಜ್ ನಲ್ಲಿ (passage) ಮಾತ್ರ ಹೋಗಿದ್ದೆ, ಪುಣ್ಯಕ್ಕೆ ದೇವಸ್ಥಾನದ ಬಾಗಿಲು ಹಾಕಿತ್ತು, ನಾನು ಮಾಂಸಾಹಾರ ಸೇವಿಸಿ ಬಹಳ ಹೊತ್ತು ಆಗಿದ್ದ ಕಾರಣ ನನಗದು ನೆನಪು ಕೂಡ ಇರಲಿಲ್ಲ. ಬಾಗಿಲು ಓಪನ್ನಾಗಿದ್ದರೆ ನಾನು ಗುಡಿಯೊಳಗೆ ಪ್ರವೇಶಿಸಿರುತ್ತಿದ್ದೆ, ಅದರಲ್ಲಿ ಅಂಥ ತಪ್ಪೇನೂ ಇಲ್ಲ ಅಂತ ಹೇಳಿ ಬೇಡರ ಕಣ್ಣಪ್ಪನನ್ನು ಅವರು ಉಲ್ಲೇಖಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ