ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ; ವಿಡಿಯೋ ವೈರಲ್

Updated on: Jun 16, 2025 | 8:12 PM

ಸೈಪ್ರಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ ಸೈಪ್ರಸ್ ಶಾಸಕಿಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ, ನಿಕೋಸಿಯಾ ಕೌನ್ಸಿಲ್ ಸದಸ್ಯೆ ಮೈಕೆಲಾ ಕೈಥ್ರಿಯೋಟಿ ಮ್ಲಾಪಾ ಅವರು ಪ್ರಧಾನಿ ಮೋದಿ ಅವರ ಪಾದಗಳನ್ನು ಮುಟ್ಟುವ ಮೂಲಕ ಸಾಂಪ್ರದಾಯಿಕ ಗೌರವದ ಸನ್ನೆಯೊಂದಿಗೆ ಸ್ವಾಗತಿಸುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ನಿಕೋಸಿಯಾ (ಸೈಪ್ರಸ್), ಜೂನ್ 16: ಸೈಪ್ರಸ್​ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಹಾಗೇ, ಸೈಪ್ರಸ್ ಶಾಸಕರು ಇಂದು ನಿಕೋಸಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟುವ ಮೂಲಕ ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಐತಿಹಾಸಿಕ ಕೇಂದ್ರ ನಿಕೋಸಿಯಾದಲ್ಲಿ ಈ ಭಾವನಾತ್ಮಕ ಕ್ಷಣ ಗಮನ ಸೆಳೆಯಿತು. ಅಲ್ಲಿ ಪ್ರಧಾನಿ ಮೋದಿ ಅವರನ್ನು ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಸ್ವಾಗತಿಸಿದರು. ಗಣ್ಯರಲ್ಲಿ ನಿಕೋಸಿಯಾ ಕೌನ್ಸಿಲ್ ಸದಸ್ಯೆ ಮೈಕೆಲಾ ಕೈಥ್ರಿಯೋಟಿ ಮ್ಲಾಪಾ ಕೂಡ ಇದ್ದರು. ಅವರು ಭಾರತೀಯ ಪ್ರಧಾನಿ ಮೋದಿಯವರಿಗೆ ಹಸ್ತಲಾಘವ ನೀಡಿ, ಅವರ ಪಾದಗಳನ್ನು ಮುಟ್ಟುವ ಮೂಲಕ ಸ್ವಾಗತಿಸಿದರು. ಪ್ರಧಾನಿ ಮೋದಿ ಆಕೆಯನ್ನು ಆಶೀರ್ವದಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ