ಪ್ರೀ ವೆಡ್ಡಿಂಗ್ ಶೂಟ್ ಮಾದರಿಯಲ್ಲಿ ಪ್ರೀ ಪಾದಯಾತ್ರೆ ಶೂಟ್ ಮಾಡಿದ್ದಾರೆ ಡಿಕೆಶಿ: ಹೆಚ್ಡಿ ಕುಮಾರಸ್ವಾಮಿ
ಕುಮಾರಸ್ವಾಮಿಯವರ ಪ್ರೀ ವೆಡ್ಡಿಂಗ್ ಶೂಟ್ನಂತೆ ಪ್ರೀ ಪಾದಯಾತ್ರೆ ಶೂಟ್ ಮಾಡಿಸಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಅವರ ಮಾತಿಗೆ ನಾನು ಏಕೆ ಕಡಿವಾಣ ಹಾಕಲಿ ಅವರು ಮಾತನಾಡಲಿ ಎಂದು ಉತ್ತರಿಸಿದ್ದಾರೆ.
ಬೆಂಗಳೂರು: ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನೂ ಇಲ್ಲ ಎಂದು ಕುಮಾರಸ್ವಾಮಿಯವರು ಮಾಡಿರುವ ಸರಣಿ ಟ್ವೀಟ್ಗಳನ್ನು ಮಾಧ್ಯಮದವರು ಶುಕ್ರವಾರದಂದು ಬೆಂಗಳೂರಲ್ಲಿ ಡಿ.ಕೆ, ಶಿವಕುಮಾರ್ ಅವರ ಗಮನಕ್ಕೆ ತಂದಾಗ, ಇತ್ತೀಚಿಗೆ ಕುಮಾರಸ್ವಾಮಿಯವರ ಕಾಮೆಂಟ್ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ, ಅವರು ದೊಡ್ಡವರು, ಅವರು ಹೇಳಿದ್ದೇ ಸರಿ ಎಂದು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಜತೆಗೆ ಕುಮಾರಸ್ವಾಮಿಯವರ ಪ್ರೀ ವೆಡ್ಡಿಂಗ್ ಶೂಟ್ನಂತೆ ಪ್ರೀ ಪಾದಯಾತ್ರೆ ಶೂಟ್ ಮಾಡಿಸಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಅವರ ಮಾತಿಗೆ ನಾನು ಏಕೆ ಕಡಿವಾಣ ಹಾಕಲಿ ಅವರು ಮಾತನಾಡಲಿ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ:
ನೀರಾವರಿ ವಿಚಾರದಲ್ಲಿ ಕೇಂದ್ರದಿಂದ ರಾಜ್ಯದ ಕಡೆಗಣನೆ; ‘ಜಲಧಾರೆ‘ ಮೂಲಕ ಜನರಿಗೆ ಅರಿವು ಮೂಡಿಸಲು ಯತ್ನ: ಹೆಚ್ಡಿ ಕುಮಾರಸ್ವಾಮಿ
Plan B ಸಿದ್ಧ: ಪಾದಯಾತ್ರೆ ವಿಚಾರದಲ್ಲಿ ಜಗ್ಗದ ಕಾಂಗ್ರೆಸ್ ನಾಯಕರು, ಪ್ರತಿ 15 ಕಿಮೀ ಅಂತರದಲ್ಲಿ ಮಿನಿ ಕಿಚನ್ ಸಿದ್ದ